Sunday, June 7, 2026
spot_imgspot_img
spot_imgspot_img

ಮಂಗಳೂರು: ನಾಳೆಯಿಂದ ಖಾಸಗಿ ಬಸ್ಸುಗಳ ಸಂಚಾರ ಆರಂಭ; ಟಿಕೆಟ್ ದರ ಶೇ. 20ರಷ್ಟು ಏರಿಕೆ

- Advertisement -
- Advertisement -

ಮಂಗಳೂರು: ಲಾಕ್‌ಡೌನ್ ಹಿನ್ನೆಲೆ 65 ದಿನಗಳ ಕಾಲ ಸಂಚಾರ ನಿಲ್ಲಿಸಿದ್ದ ಖಾಸಗಿ ಬಸ್‌ಗಳ ಸಂಚಾರ ನಾಳೆಯಿಂದ ಜುಲೈ 1ರಿಂದ ಆರಂಭವಾಗಲಿದೆ. ಬಸ್ ಮಾಲೀಕರ ಸಂಘ ಸಿದ್ದತೆ ಮಾಡಿಕೊಂಡಿದೆ.

ಈಗಾಗಲೇ ದ.ಕ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹಾಗೂ ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಜುಲೈ 1ರಿಂದ ಖಾಸಗಿ ಬಸ್ ಸಂಚಾರಕ್ಕೆ ತೀರ್ಮಾನಿಸಲಾಗಿದೆ.

“ಕೊರೊನಾ ಮಾರ್ಗಸೂಚಿ ಪಾಲಿಸಿ ಬಸ್ ಸಂಚಾರ ಆರಂಭವಾಗಲಿದೆ. ಬಸ್ ಟಿಕೆಟ್ ದರ ಶೇ.20ರಷ್ಟು ಏರಿಕೆ ಮಾಡಲಾಗಿದ್ದು, 10 ರೂ ಇದ್ದ ಮೊದಲ ಸ್ಟೇಜ್ ದರ 12 ರೂ. ಆಗಲಿದೆ. ಕೊರೊನಾ ಮಾರ್ಗಸೂಚಿ ಇರುವ ತನಕ ದರ ಏರಿಕೆ ಇರಲಿದೆ” ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಮಾಹಿತಿ ಹಂಚಿಕೊಂಡರು. ಈ ಹಿನ್ನೆಲೆ ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸಿಕೊಂಡು ಖಾಸಗಿ ಬಸ್ ಸಂಚಾರ ಆರಂಭಗೊಳ್ಳಲಿದೆ.

- Advertisement -

Related news

error: Content is protected !!