- Advertisement -
- Advertisement -
ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಫೆ. 24ರಂದು ನೀರಾಟವಾಡುತ್ತಿದ್ದಾಗ ಬೃಹತ್ ಅಲೆಗೆ ಕೊಚ್ಚಿಹೋಗಿ ಮುಳುಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ತುಕಾರಾಮ (13) ಅವರ ಮೃತದೇಹ ರವಿವಾರ ಮುಂಜಾನೆ ತಣ್ಣೀರುಬಾವಿ ಬಳಿ ಪತ್ತೆಯಾಗಿದೆ.
ಮೀನುಗಾರರು ಮೃತದೇಹ ತೇಲುತ್ತಿರುವುದನ್ನು ಕಂಡಿದ್ದು, ಧನಪಾಲ್ ಸಾಲ್ಯನ್ ಅವರು ದಡಕ್ಕೆ ಎಳೆದು ತಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಬೈಕಂಪಾಡಿ ಮೀನಕಳಿಯ ಸರಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ತುಕಾರಾಮ್ ಶಾಲೆ ಬಿಟ್ಟ ಬಳಿಕ ಸ್ನೇಹಿತ ಮಾರುತಿ ಜತೆ ಪಣಂಬೂರು ಬೀಚ್‌ಗೆ ಆಗಮಿಸಿ ನೀರಾಟದಲ್ಲಿ ತೊಡಗಿದ್ದ. ಆದರೆ ಈ ವೇಳೆ ಬೃಹತ್ ಅಲೆಗೆ ಕೊಚ್ಚಿ ಹೋಗಿದ್ದ. ಬೀಚ್‌ನಲ್ಲಿದ್ದ ಇತರರು ವಿದ್ಯಾರ್ಥಿ ಮುಳುಗುತ್ತಿರುವುದನ್ನು ಕಂಡು ಬೀಚ್‌ನ ರಕ್ಷಣ ದಳಕ್ಕೆ ತಿಳಿಸಿದ್ದರು. ತಕ್ಷನ ಜೆಟ್ ಸ್ಕೀ ಮೂಲಕ ಕಾಪಾಡಲು ಯತ್ನಿಸಿದರೂ ಆತನ ಸುಳಿವು ಸಿಕ್ಕಿರಲಿಲ್ಲ
ಬಾಲಕ ಉತ್ತರ ಕರ್ನಾಟಕ ಮೂಲದವರಾಗಿದ್ದು, ಕೆಲಸದ ನಿಮಿತ್ತ ಬಂದಿದ್ದ ಇವರ ಪೋಷಕರು ಬೈಕಂಪಾಡಿ ಮೀನಕಳಿಯ ಬಳಿ ವಾಸವಿದ್ದರು.
- Advertisement -