Friday, June 19, 2026
spot_imgspot_img
spot_imgspot_img

ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡಲು ವಿಶೇಷ ರೀತಿಯ ಒಳಉಡುಪು ತಯಾರಿಸಿದ ಭೂಪ..! ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಖತರ್ನಾಕ್ ವ್ಯಕ್ತಿ

- Advertisement -
- Advertisement -

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಇಂದು ದುಬೈನಿಂದ ಏರ್ ಇಂಡಿಯಾ ಪ್ಲೈಟ್ ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬನನ್ನು ತಪಾಸಣೆ ನಡೆಸಿದಾಗ ಗೋಲ್ಡ್ ಸ್ಮಗ್ಲಿಂಗ್ ಬೆಳಕಿಗೆ ಬಂದಿದೆ.

ಕೊಪ್ಪದ ಮೊಹಮ್ಮದ್ ಖಾಲಿದ್ ಎಂಬ 45 ವರ್ಷದ ವ್ಯಕ್ತಿ ಯನ್ನು ತಪಾಸಣೆ ನಡೆಸಿದಾಗ ಈತನ ಒಳಚಡ್ಡಿಯಲ್ಲಿ 737 ಗ್ರಾಂ ಚಿನ್ನ ಪತ್ತೆಯಾಗಿದೆ. ಈತ ಚಿನ್ನ ಸ್ಮಗ್ಲಿಂಗ್ ಮಾಡಲೆಂದೆ ಚಡ್ಡಿಯನ್ನು ವಿಶೇಷ ರೀತಿಯಲ್ಲಿ ಡಿಸೈನ್ ಮಾಡಿಸಿದ್ದ.

ಈತನಿಂದ ವಶಪಡಿಸಿಕೊಂಡ ಚಿನ್ನದ ಬೆಲೆ ರೂ 3375470 ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!