Thursday, May 9, 2024
spot_imgspot_img
spot_imgspot_img

ಮಂಗಳೂರು: ಎದೆಮಟ್ಟಕ್ಕೆ ನೀರಿದ್ದರೂ ಅಪಾಯವನ್ನು ಲೆಕ್ಕಿಸದೇ ವಿದ್ಯುತ್‌ ಕಂಬವೇರಿ ದುರಸ್ತಿ; ಕರ್ತವ್ಯ ಪಾಲಿಸಿದ ಲೈನ್‌ಮ್ಯಾನ್‌ಗೆ ಸಾರ್ವಜನಿಕರ ಪ್ರಶಂಸೆ

- Advertisement -G L Acharya panikkar
- Advertisement -
vtv vitla

ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೇ ಭಾರೀ ಮಳೆ ಸುರಿಯುತ್ತಿದ್ದು, ಈ ಮಳೆಯ ನಡುವೆಯೂ ಲೈನ್ ಮ್ಯಾನ್ ಒಬ್ಬರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಭಾರೀ ಮಳೆಗೆ ವಿದ್ಯುತ್ ಕೈಕೊಟ್ಟು 40 ರಷ್ಟು ಮನೆಗಳಿಗೆ ಕರೆಂಟ್ ಇಲ್ಲದಾಗಿತ್ತು. ಈ ವಿಚಾರವನ್ನು ನಿವಾಸಿಗಳು ಸ್ಥಳೀಯ ಲೈನ್ ಮ್ಯಾನ್ ಒಬ್ಬರ ಗಮನಕ್ಕೆ ತಂದಿದ್ದಾರೆ. ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಲೈನ್ ಮ್ಯಾನ್ ಸುರಿಯುತ್ತಿದ್ದ ಜಡಿಮಳೆಯನ್ನು ಲೆಕ್ಕಿಸದೇ ತನ್ನ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾರೀ ಮಳೆಯಿಂದ ಎಲ್ಲಿ ನೋಡಿದರೂ ನೀರಾಗಿತ್ತು. ವಿದ್ಯುತ್ ಕಂಬದ ಸುತ್ತ ಎದೆಮಟ್ಟಕ್ಕೆ ನೀರು ನಿಂತಿದ್ದರಿಂದ ಭಾರೀ ಅಪಾಯ ಕಾದಿತ್ತು. ಹೀಗಿದ್ದರೂ ಲೆಕ್ಕಿಸದೇ ಲೈನ್ ಮ್ಯಾನ್ ಅವರು ನೆರೆ ನೀರಿನಲ್ಲಿ ಮುಳುಗೆದ್ದು ಹೋಗಿ ವಿದ್ಯುತ್ ಕಂಬವನ್ನೇರಿ ತುರ್ತು ದುರಸ್ತಿ ಕಾರ್ಯ ನಡೆಸಿದ್ದಾರೆ.ಸದ್ಯ ಮೆಸ್ಕಾಂ ಸಿಬಂದಿಯ ಕಾರ್ಯ ತತ್ಪರತೆಗೆ ಸಾರ್ವಜನಿಕರು ಶಹಬ್ಬಾಸ್ ಎಂದಿದ್ದಾರೆ.

- Advertisement -

Related news

error: Content is protected !!