Friday, July 31, 2026
spot_imgspot_img
spot_imgspot_img

ಮಂಗಳೂರು: ಮೀನು ಹಿಡಿಯುವ ವೇಳೆ ಕಾಲಿಗೆ ಬಲೆ ಸಿಲುಕಿ ನೀರಲ್ಲಿ ಮುಳುಗಿ ಮೀನುಗಾರ ಸಾವು

- Advertisement -
- Advertisement -

ಮಂಗಳೂರು: ಅಳಿವೆ ಬಾಗಿಲು ನದಿ ಸಮೀಪ ಮೀನುಗಾರರೊಬ್ಬರು ಬಲೆ ಹರಡಿ ಮೀನು ಹಿಡಿಯುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ತೋಟ ಬೆಂಗ್ರೆ ನಿವಾಸಿ ಜಯ ಪುತ್ರನ್(55) ಎಂಬವರು ಮೀನು ಹಿಡಿಯುವ ಕೆಲಸ ಮಾಡುತ್ತಿದ್ದು, ನಿನ್ನೆ ಭಾರೀ ಗಾಳಿ ಮಳೆ ಬಂದು ಆಕಸ್ಮಿಕವಾಗಿ ಬಲೆ ಕೈ ಕಾಲಿಗೆ ಸಿಲುಕಿ ಈಜಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟರು ಎನ್ನಲಾಗಿದೆ.

ಮನೆಗೆ ಬಾರದೇ ಇದ್ದಾಗ ಹುಡುಕಾಟ ನಡೆಸಿದ್ದು, ಮೃತದೇಹ ಕಸಬ ಬೆಂಗ್ರೆ ಬಳಿ ಪತ್ತೆಯಾಗಿದೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಈ ಕುಟುಂಬಕ್ಕೆ ಇವರೇ ಜೀವನಾಧಾರವಾಗಿದ್ದರು. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Related news

error: Content is protected !!