Tuesday, June 9, 2026
spot_imgspot_img
spot_imgspot_img

ಮಂಗಳೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಕರಾವಳಿಯ ಕುವರಿ!

- Advertisement -
- Advertisement -

ಮಂಗಳೂರು: ಸಾಧನೆ ಮಾಡಲು ಛಲವಿದ್ದರೆ ಯಾವ ಕ್ಷೇತ್ರದಲ್ಲೂ ಕೂಡ ಸಾಧನೆ ಮಾಡಬಹುದು. ಇಂತಹದ್ದೇ ಒಂದು ಸಾಧನೆಯನ್ನು ಕರಾವಳಿಯ ಕುವರಿ ಆದಿ ಸ್ವರೂಪ ಮಾಡಿದ್ದಾಳೆ.

ಮಂಗಳೂರಿನ ಆದಿ ಸ್ವರೂಪ ಎಸ್ ಎಸ್ ಎಲ್ ಸಿಯ ಸಂಪೂರ್ಣ ಪಠ್ಯವನ್ನು ಚಿತ್ರಗಳಲ್ಲೇ ಬಿಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ಬರೆದಿದ್ದು, ಈಕೆ ಆರು ವಿಷಯಗಳನ್ನು ಕೇವಲ A4 ಗಾತ್ರದ ಎಂಟು ಹಾಳೆಗಳಲ್ಲಿ ಅಡಕ ಮಾಡಿದ್ದಾಳೆ. ಇದೇ ಸೋಮವಾರದಂದು ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಗರಿಷ್ಠ ಅಂಕ ಪಡೆಯುವ ವಿಶ್ವಾಸ ಇರುವುದಾಗಿ ಆದಿ ಸ್ವರೂಪ ತಿಳಿಸಿದ್ದಾಳೆ. ಇದೊಂದು ವಿಶ್ಯುವಲ್ ಆರ್ಟ್ ಮಾದರಿಯಾಗಿದ್ದು, ಸ್ಮರಣ ಶಕ್ತಿ ಮೆದುಳಿನ ಚುರುಕಿಗೆ ಈ ಚಿತ್ರಗಳು ಸಹಕಾರಿಯಾಗುತ್ತವೆ. ಇತರ ಮಕ್ಕಳಿಗೂ ಇದು ಪ್ರೇರಣೆಯಾಗಲಿ ಎಂದು ದಾಖಲೆ ಮಾಡಿರುವ ಆದಿ ಸ್ವರೂಪ ಹೇಳಿದ್ದಾಳೆ.

- Advertisement -

Related news

error: Content is protected !!