Monday, April 29, 2024
spot_imgspot_img
spot_imgspot_img

ಮಂಗಳೂರು: ಹಿಂದೂ ಯುವತಿಯರ ಜೊತೆ ಅನ್ಯಕೋಮಿನ ಯುವಕ ಪತ್ತೆ ಪ್ರಕರಣ; ಯುವಕರ ಡ್ರಗ್ಸ್ ಟೆಸ್ಟ್ ಪಾಸಿಟಿವ್!

- Advertisement -G L Acharya panikkar
- Advertisement -
driving

ಮಂಗಳೂರು: ಮಂಗಳೂರು ಹೊರವಲಯದ ಗುರುಪುರ ಬಳಿಯ ಚಿಲಿಂಬಿಗುಡ್ಡೆ ಎಂಬಲ್ಲಿ ಹಿಂದೂ ಯುವತಿಯರ ಜೊತೆ ಬಂದಿದ್ದ ಅನ್ಯಕೋಮಿನ ಯುವಕನೊಬ್ಬನನ್ನು ಭಜರಂಗದಳದ ಕಾರ್ಯಕರ್ತರು ತಡೆದಿದ್ದು, ಈ ವೇಳೆ ಯುವಕರು ಡ್ರಗ್ಸ್ ಸೇವಿಸಿರೋದು ಬೆಳಕಿಗೆ ಬಂದಿದೆ.

ನಿರ್ಜನ ಪ್ರದೇಶದಲ್ಲಿ ಇಬ್ಬರು ಯುವಕರ ಜೊತೆ ಓರ್ವ ಯುವತಿ ಹಾಗೂ ಓರ್ವ ಅಪ್ರಾಪ್ತೆ ಪತ್ತೆಯಾಗಿದ್ದಾರೆ. ಇಬ್ಬರು ಯುವಕರಲ್ಲಿ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕ. ಸ್ಥಳಕ್ಕೆ ಬಂದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಯುವಕರು ಮಾದಕ ವಸ್ತು ಸೇವನೆ ಮಾಡಿರುವ ಮಾಹಿತಿಯನ್ನು ಸಂಘಟನೆಯವರು ನೀಡಿದ್ದರಿಂದ ಯುವಕರ ಡ್ರಗ್ಸ್ ಟೆಸ್ಟ್ ಮಾಡಿಸಿದ್ದು, ಇದೀಗ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಡ್ರಗ್ಸ್ ಸೇವಿಸಿರುವ ಆರೋಪದಡಿಯಲ್ಲಿ ಬಜ್ಪೆ ಠಾಣಾ ಪೊಲೀಸರು ಶಾಕೀರ್, ಧೀರಜ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಭಾನುವಾರ ಸಂಜೆ ಈ ತಂಡ ಚಿಲಿಂಬಿಗುಡ್ಡೆಗೆ ನಾಲ್ವರು ಕಾರೊಂದರಲ್ಲಿ ಬಂದಿದ್ದರು. ಆದರೆ ಆ ಕಾರಿಗೆ ನಂಬರ್ ಪ್ಲೇಟ್ ಇಲ್ಲದೆ ಇದ್ದುದರಿಂದ ಸ್ಥಳೀಯರಿಗೆ ಅನುಮಾನ ಬಂದಿತ್ತು.‌ ಇನ್ನು ತಂಡದಲ್ಲಿ ಓರ್ವಳು ಅಪ್ರಾಪ್ತೆಯಾಗಿದ್ದು,ಆಕೆಯ ಮನೆಯವರು ನೀಡಿದ ದೂರಿನ‌ ಆಧಾರದ ಮೇಲೆ‌ ಪೋಕ್ಸೋ ಪ್ರಕರಣ ದಾಖಲಾಗಿದೆ.

ಹೀಗಾಗಿ ಇಬ್ಬರು ಯುವಕರ ವಿರುದ್ದ ಮಾದಕವಸ್ತು ಸೇವನೆಯ ಕೇಸ್ ಜೊತೆ ಪೋಕ್ಸೋ ಪ್ರಕರಣವೂ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.‌

ಇದನ್ನೂ ಓದಿ: ಮಂಗಳೂರು: ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿಯರು ಪತ್ತೆ..! ಪೊಲೀಸರಿಗೆ ಒಪ್ಪಿಸಿದ ಬಜರಂಗದಳದ ಕಾರ್ಯಕರ್ತರು

- Advertisement -

Related news

error: Content is protected !!