Thursday, June 4, 2026
spot_imgspot_img
spot_imgspot_img

ಮಂಗಳೂರು: ಮಕ್ಕಳೊಂದಿಗೆ ಅಸಭ್ಯ ವರ್ತನೆ; ಇಬ್ಬರು ತಳ್ಳುಗಾಡಿ ವ್ಯಾಪಾರಿಗಳ ಬಂಧನ

- Advertisement -
- Advertisement -

ಮಂಗಳೂರು: ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇಲೆ ಇಬ್ಬರು ತಳ್ಳುಗಾಡಿ ವ್ಯಾಪಾರಿಗಳನ್ನು ಮಹಿಳಾ ಪೊಲೀಸ್ ಅರೆಸ್ಟ್ ಮಾಡಿದ್ದಾರೆ.

ಅಮರ್‌ ಮತ್ತು ಸೂರಜ್‌ ಬಂಧಿತ ಆರೋಪಿಗಳು. ಇವರು ಅತ್ತಾವರದಲ್ಲಿ ನಡೆದುಕೊಂಡು ಹೋಗುವ ಮಕ್ಕಳ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ, ಮಕ್ಕಳು ಹಾದು ಹೋಗುವಾಗ ಹಿಂಬಾಲಿಸಿ, ಕೆಟ್ಟ ದೃಷ್ಠಿಯಿಂದ ನೋಡುವ ಆರೋಪ ಕೇಳಿಬಂದಿತ್ತು. ಮಂಗಳೂರು ಪೊಲೀಸ್ ಆಯುಕ್ತರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಈ ದೂರು ಬಂದಿತ್ತು.

ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Insta: glacharyajewellers
Fb: glacharya

- Advertisement -

Related news

error: Content is protected !!