Tuesday, July 28, 2026
spot_imgspot_img
spot_imgspot_img

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ನೀರಿಲ್ಲದೆ ರೋಗಿಗಳ ಪರದಾಟ; ಶಾಸಕರಿಂದ ಸಮಸ್ಯೆ ಪರಿಹಾರ

- Advertisement -
- Advertisement -

ಮಂಗಳೂರು: ದ.ಕ ಜಿಲ್ಲಾ ಲೇಡಿಗೋಷನ್ ಆಸ್ಪತ್ರೆಯಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯೆಯಾಗಿರುವ ಕುರಿತು ಮಾಹಿತಿ ಪಡೆದು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಲೇಡಿಗೋಷನ್ ಆಸ್ಪತ್ರೆಯ ಸಂಪಿನಿಂದ ಮೇಲಿನ ಟ್ಯಾಂಕಿಗೆ ನೀರು ಸರಬರಾಜು ಮಾಡಲು 2 ಪಂಪ್ ಅಳವಡಿಸಲಾಗಿತ್ತು. ಅದರಲ್ಲಿ 1 ಪಂಪ್ ಹಾಳಾದ ಹಿನ್ನೆಲೆಯಲ್ಲಿ ಮತ್ತೊಂದು ಪಂಪಿನ ಮೂಲಕ ನೀರು ಸರಬರಾಜು ಮಾಡಲಾಗುತಿತ್ತು. ಆದರೆ ಇಂದು ಮುಂಜಾನೆ ಚಾಲನೆಯಲ್ಲಿದ್ದ ಪಂಪ್ ಹಾಳಾಗಿ ನೀರು ಸರಬರಾಜಿಗೆ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.

ಈಗಾಗಲೇ ಹಾಳಾದ ಪಂಪಿನ ರಿಪೇರಿ ಮತ್ತು ಹೊಸದಾದ ಪಂಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇಕಾದ ಸಾಮಾಗ್ರಿಗಳು ದೊರೆಯದೆ ಇರುವುದೂ ಕೂಡ ರಿಪೇರಿ ಮಾಡಲು ವಿಳಂಬವಾಗಿತ್ತು. ಆದರೆ ತಕ್ಷಣವೇ ಹೊಸ ಪಂಪ್ ಅಳವಡಿಸಲಾಗಿದ್ದು ಸಮಸ್ಯೆ ನಿವಾರಣೆಯಾಗಿದೆ. ಈ ವಿಚಾರದಲ್ಲಿ ರಾಜಕೀಯ ಎಳೆದು ತರುವ ಅವಶ್ಯಕತೆ ಇಲ್ಲ ಎಂದರು.

- Advertisement -

Related news

error: Content is protected !!