Tuesday, April 23, 2024
spot_imgspot_img
spot_imgspot_img

ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಆಗಿ ಸುಮಂಗಲಾ ರಾವ್‌ ಆಯ್ಕೆ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ಎರಡನೇ ಅವಧಿಯ ಮೇಯರ್‌, ಉಪಮೇಯರ್‌ ಚುನಾವಣೆ ಇಂದು ನಡೆದಿದ್ದು ಮೇಯರ್‌ ಆಗಿ ಬಿಜೆಪಿಯ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಆಗಿ ಸುಮಂಗಲಾ ರಾವ್‌ ಆಯ್ಕೆಯಾಗಿದ್ದಾರೆ.

ಮೇಯರ್‌ ಸಾಮಾನ್ಯ ಹಾಗೂ ಉಪ ಮೇಯರ್‌ ಸಾಮಾನ್ಯ ಮಹಿಳೆ ಮೀಸಲಾತಿಯಿದ್ದು ಮೇಯರ್‌ ಸ್ಥಾನಕ್ಕೆ ಪ್ರೇಮಾನಂದ ಅವರ ಹೆಸರು ಕೇಳಿಬಂದಿದ್ದರೂ ಕೂಡಾ ಉಪಮೇಯರ್‌ ಸ್ಥಾನಕ್ಕೆ ಸುಮಾರು 10 ಕ್ಕೂ ಅಧಿಕ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದರು. ಮಾರ್ಚ್ 2 ರ ಮಂಗಳವಾರ ಮಧ್ಯಾಹ್ನ ಮತದಾನ ನಡೆದಿದ್ದು ನಿರೀಕ್ಷೆಯಂತೆ ಮೇಯರ್‌ ಆಗಿ ಪ್ರೇಮಾನಂದ ಶೆಟ್ಟಿಯವರು ಆಯ್ಕೆಯಾಗಿದ್ದು ಉಪಮೇಯರ್‌ ಆಗಿ ಸುಮಂಗಲಾ ರಾವ್‌ ಆಯ್ಕೆಯಾಗಿದ್ದಾರೆ.

ಒಟ್ಟು 64 ಮತಗಳು (60 ಕಾರ್ಪೊರೇಟರ್‌ಗಳು, 2 ಶಾಸಕರು) ಮತಗಳಿದ್ದು ಸಂಸದ ನಳಿನ್‌ ಕುಮಾರ್ ಕಟೀಲ್ ಮತ್ತು ಎಂಎಲ್‌ಸಿ ಬಿ ಎಂ ಫಾರೂಕ್ ಗೈರುಹಾಜರಾಗಿದ್ದರು. ಶಾಸಕ ವೇದವ್ಯಾಸ್ ಕಾಮತ್, ಶಾಸಕ ಭರತ್ ವೈ ಶೆಟ್ಟಿ ಉಪಸ್ಥಿತರಿದ್ದರು. ಎಸ್‌ಡಿಪಿಐನ ಇಬ್ಬರು ತಟಸ್ಥರಾಗಿ ನಿಂತರು. ಚುನಾವಣೆ ನಡೆಸಲು ಚುನಾವಣಾ ಅಧಿಕಾರಿ ಪ್ರಕಾಶ್, ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಮನಪಾ ಉಪ ಆಯುಕ್ತ ಸಂತೋಷ್ ಉಪಸ್ಥಿತರಿದ್ದರು.

ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿ ಬಿಜೆಪಿಯ ಪ್ರೇಮಾನಂದ ಶೆಟ್ಟಿ ಅವರು 46 ಮತಗಳನ್ನು ಗಳಿಸಿ ಜಯ ಗಳಿಸಿದ್ದು ಕಾಂಗ್ರೆಸ್‌ನ ಅನಿಲ್ ಕುಮಾರ್ 14 ಮತಗಳನ್ನು ಗಳಿಸಿದರು. ಉಪಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ಸುಮಂಗಲಾ ರಾವ್ 46 ಮತಗಳನ್ನು ಗಳಿಸಿದರೆ, ಕಾಂಗ್ರೆಸ್‌ನ ಜೆಸಿಂತಾ ಆಲ್ಫ್ರೆಡ್ 14 ಮತಗಳನ್ನು ಗಳಿಸಿದ್ದಾರೆ.ಈ ವೇಳೆಯೂ ಎಸ್‌ಡಿಪಿಐ ತಟಸ್ಥ ನಿಲುವು ತೋರಿದೆ.

- Advertisement -

Related news

error: Content is protected !!