Friday, June 26, 2026
spot_imgspot_img
spot_imgspot_img

ಮಂಗಳೂರು: ಕೋವಿಡ್ ನಿಯಮ ಉಲ್ಲಂಘಿಸಿ ಆಯೋಜಿಸಿದ ಮೆಹಂದಿ ಕಾರ್ಯಕ್ರಮ; ದೂರು ದಾಖಲು!

- Advertisement -
- Advertisement -

ಮಂಗಳೂರು: ಅನುಮತಿ ಇಲ್ಲದೆ ಮೆಹಂದಿ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಕೋವಿಡ್-19 ನಿಯಮ ಉಲ್ಲಂಘಿಸಿದ ಆರೋಪದಡಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಾವೂರಿನ ಶೋಭಾ ಎಂಬುವರು ಮೇ 20ರಂದು ಕೌಶಲ್ಯ ಅವರ ಮದುವೆಯ ಬಗ್ಗೆ ಪಂಚಾಯಿತಿಯಿಂದ ಷರತ್ತುಬದ್ಧ ಅನುಮತಿ ಪಡೆದಿದ್ದು, ಆದರೆ ಮೇ 19ರಂದು ರಾತ್ರಿ ಅನುಮತಿ ಇಲ್ಲದೆ ಮೆಹಂದಿ ಕಾರ್ಯಕ್ರಮ ಆಯೋಜಿಸಿದ್ದರು. ಧ್ವನಿವರ್ಧಕ ಬಳಸಿ ಸುರಕ್ಷಿತ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ನೃತ್ಯ ಮಾಡುವ ಮೂಲಕ ಕೋವಿಡ್-19 ನಿಯಮ ಉಲ್ಲಂಘಿಸಿದ್ದಾರೆ ಎಂದು ಪಾವೂರು ಪಿಡಿಒ ಸುಧಾರಾಣಿ ದೂರು ನೀಡಿದ್ದಾರೆ.

ಕೊಣಾಜೆ ಪೊಲೀಸರು ಕರ್ನಾಟಕ ಸಾಂಕ್ರಾಮಿಕ ತಡೆ ಕಾಯ್ದೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!