Sunday, July 6, 2025
spot_imgspot_img
spot_imgspot_img

ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಪ್ರಕರಣ; ಆರೋಪಿಯ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ಅಪ್ರಾಪ್ತ ಬಾಲಕಿಗೆ ಒಂದೂವರೆ ವರ್ಷದ ಹಿಂದೆ ಸ್ನೇಹಿತರ ಮುಖಾಂತರ ಜೋಕಟ್ಟೆಯ ಅಬ್ದುಲ್ ರಫೂರ್ ಎಂಬಾತನ ಪರಿಚಯವಾಗಿತ್ತು. ಆರೋಪಿ ಅಪ್ರಾಪ್ತ ಬಾಲಕಿಗೆ ಮೊಬೈಲ್ ಫೋನ್ ತೆಗೆಸಿಕೊಟ್ಟು ಪ್ರತಿ ದಿನ ಫೋನ್ ಹಾಗೂ ಮೆಸೇಜ್ ಮಾಡಿ ಮಾತನಾಡುತ್ತಿದ್ದ.

2020 ನೇ ಅಕ್ಟೋಬರ್ ಮೊದಲನೇ ವಾರದಿಂದ ಅಪ್ರಾಪ್ತ ನೊಂದ ಬಾಲಕಿಯ ಮನೆಗೆ ಈತ ಕಳ್ಳದಾರಿಯಲ್ಲಿ ಬಂದು ಅತ್ಯಾಚಾರ ಮಾಡಲು ಆರಂಭಿಸಿದ್ದಾನೆ. ಈತ ಪ್ರತಿ ದಿನ ರಾತ್ರಿ 1 ಗಂಟೆಗೆ ಅಪ್ರಾಪ್ತ ಬಾಲಕಿಯ ಮನೆಯ ಕಂಪೌಂಡ್ ಗೋಡೆಯನ್ನು ಹಾರಿ, ಮನೆಯ ಬಾಲ್ಕನಿಯ ಬಾಗಿಲನ್ನು ತೆಗೆಯುವಂತೆ ಒತ್ತಾಯಿಸಿ ಮನೆಯೊಳಗೆ ಬರುತ್ತಿದ್ದ.

ಆರೋಪಿ ಅಬ್ದುಲ್ ರಫೂರ್ ಕೋಣೆಯ ಒಳಗೆ ಬಂದು ಅಪ್ರಾಪ್ತ ನೊಂದ ಬಾಲಕಿಯನ್ನು ಗಟ್ಟಿಯಾಗಿ ಅಪ್ಪಿ ಹಿಡಿದು, ಕಿಸ್ ಮಾಡಿ, ಮದುವೆಯಾಗುವುದಾಗಿ ನಂಬಿಸಿ, ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಈ ರೀತಿ ಆರೋಪಿ ಅಪ್ರಾಪ್ತ ನೊಂದ ಬಾಲಕಿಯೊಂದಿಗೆ ಹಲವಾರು ಬಾರಿ ಲೈಂಗಿಕ ಸಂಪರ್ಕ ನಡೆಸಿದ್ದು ಜೂನ್ 9 ರಂದು ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.

ಕಾವೂರು ಗಾಂಧಿನಗರದ ಕ್ಲಿನಿಕ್ ಗೆ ಹೋಗಿ ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗುವುದು ತಿಳಿದುಬಂದಿದೆ. ವೈದ್ಯರ ಸೂಚನೆಯಂತೆ ನೊಂದ ಅಪ್ರಾಪ್ತ ಬಾಲಕಿಯು ಗರ್ಭೀಣಿಯಾಗಿರುವುದರಿಂದ ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!