Saturday, April 27, 2024
spot_imgspot_img
spot_imgspot_img

ಪತಿರಾಯ ಅಕ್ರಮ ಸಂಬಂಧ ಪ್ರಶ್ನಿಸಿದ್ದೇ ಮುಳುವಾಯಿತು..! ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪಾಪಿ

- Advertisement -G L Acharya panikkar
- Advertisement -

ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಕೊಲೆಗೈದ ಘಟನೆ ಚಾಮರಾಜನಗರದ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ. ಎಂ.ಸಿ.ಸೌಮ್ಯ (27) ಕೊಲೆಯಾದ ಮಹಿಳೆ.

ಏಳು ವರ್ಷಗಳ ಹಿಂದೆ ಸೌಮ್ಯಳನ್ನು ವಿವಾಹವಾಗಿದ್ದ ಮಹೇಶ್ ಚಂದ್ರಗುರು ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಸೌಮ್ಯಾ, ಪತಿಯನ್ನು ಪ್ರಶ್ನೆ ಮಾಡಿದ್ದಾರೆ. ಪತ್ನಿ ಪ್ರಶ್ನಿಸಿದ್ದಕ್ಕೆ ಸಿಟ್ಟುಗೊಂಡ ಮಹೇಶ್ ಚಂದ್ರಗುರು, ಸೌಮ್ಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಪತಿ ಮಹೇಶ್ ಚಂದ್ರಗುರುವನ್ನು ಪೊಲೀಸರು ಬಂಧಿಸಿದ್ದಾರೆ.

ದಂಪತಿಗೆ 5 ವರ್ಷದ ಹೆಣ್ಣು ಮಗುವಿದೆ. ಇದೀಗ ಪ್ರಕರಣ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!