Monday, May 6, 2024
spot_imgspot_img
spot_imgspot_img

ಮಂಗಳೂರು: ಪುತ್ತಿಲ ಬಿಜೆಪಿ ಪಕ್ಷಕ್ಕೆ ಬರೋದಾದ್ರೆ ಪಕ್ಷದ ಯಾವುದೇ ಅಭ್ಯಂತರವಿಲ್ಲ; ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

- Advertisement -G L Acharya panikkar
- Advertisement -

ಮಂಗಳೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ “ಅರುಣ್ ಕುಮಾರ್ ಪುತ್ತಿಲ ಅವರ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಚಾರವಾಗಿ ಸತ್ಯ ತಿಳಿಸಲು ಪತ್ರಿಕಾಗೋಷ್ಠಿ ಕರೆಯಲಾಗಿದೆ ಎಂದರು. ಪುತ್ತಿಲ ಅವರು ಮೊದಲು ಬಿಜೆಪಿ ಕಾರ್ಯಕರ್ತರಾಗಿದ್ದರು. ಬಿಜೆಪಿಗೋಸ್ಕರ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ನಿಂತಿದ್ದರು. ಅವರು ಪಕ್ಷಕ್ಕೆ ಬರ್ತಾರೆ ಅಂತಾದ್ರೆ ನಮಗೆ ಯಾವುದೇ ಅಭ್ಯಂತರವಿಲ್ಲ ನಾವು ಕರೆಯುತ್ತೇವೆ.

ಮೊನ್ನೆ ನಡೆದ ಸಮಾವೇಶದಲ್ಲಿ ಪುತ್ತಿಲ ಪರಿವಾರದಿಂದ 3 ದಿನ ಗಡುವು ಕೊಟ್ಟಿದ್ದರು ಆದರೆ ರಾಷ್ಟ್ರೀಯ ಪಕ್ಷಕ್ಕೆ ಗಡುವು ಸ್ವೀಕರಿಸುವ ವ್ಯವಸ್ಥೆ ಇಲ್ಲ. ಹಾಗಂತ ಅದು ಬೇಡ ಅಂತ ಅಲ್ಲ. ಅವರನ್ನು ಸೇರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಪುತ್ತಿಲರಲ್ಲಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಷರತ್ತು ಸರಿಯಲ್ಲ ಪಾರ್ಟಿ ಸೇರ್ಕೊಳ್ಳಿ, ನಿಮಗೆ ಗೌರವಯುತವಾಗಿ ಸ್ಥಾನಮಾನ ಕೊಡುತ್ತೇವೆ ವೆ ಅಂತ ಭರವಸೆ ನೀಡಿದ್ದಾರೆ.

ಬಿಜೆಪಿ ವತಿಯಿಂದ ಯಾವುದೇ ಕಾಲಹರಣ ಆಗಿಲ್ಲ., ಸೇರ್ಪಡೆಗೆ ಎಲ್ಲಾ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಆಹ್ವಾನ ಕೊಡಲಾಗಿತ್ತು. ಯಾವ ಕಾರಣಕ್ಕೆ ಬರ್ಲಿಲ್ಲ ಅಂತ ಪುತ್ತಿಲ ಅವರೇ ಉತ್ತರ ಕೊಡಬೇಕು. ಇವತ್ತಿಗೂ ಮಾತುಕತೆ ಹಂತದಲ್ಲಿ ಇದ್ದೇವೆ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಸತೀಶ್ ಕುಂಪಲ ಶೀಘ್ರ ಬರುವ ವ್ಯವಸ್ಥೆ ಮಾಡುತ್ತೇವೆ ನಾವು ಕೂಡ ಅವರನ್ನು ಸೇರಿಸಲು ರೆಡಿ ಇದ್ದೇವೆ. ಯಾರೆಲ್ಲ ಸೇರ್ಬೇಕು ಎಲ್ಲರಿಗೂ ಮುಕ್ತ ಅವಕಾಶ ನೀಡುತ್ತೇವೆ. ಮಂಡಲ ಅಧ್ಯಕ್ಷ ಕೊಡೋಕು ಅಂತ ಹೇಳಿದ್ದಾರೆ ಆದರೆ ಒಂದು ಸಲ ಪಾರ್ಟಿಗೆ ಸೇರಿದ ಮೇಲೆ ಈ ಪ್ರಕ್ರಿಯೆ ನಡೆಯುತ್ತೆ. ಪಾರ್ಟಿ ಬಂದ ಮೇಲೆ ನೋಡುವ ಅಂತ ಹೇಳಲಾಗಿತ್ತು. ಇದು ಅವರಿಗೆ ಕೂಡ ಗೊತ್ತಿದೆ ಎಂದರು.ಅರುಣ್ ಕುಮಾ‌ರ್ ಪುತ್ತಿಲ ಅವರು ಬೇಷರತ್ ಆಗಿ ಸೇರ್ಪಡೆಗೊಳ್ಳುವುದಾದರೆ ಯಾವುದೇ ಅಭ್ಯಂತರವಿಲ್ಲ ಎಂದರು.

ಪಕ್ಷ ಸೇರ್ಪಡೆ ವಿಚಾರವನ್ನು ಅವರು ಪುರಸ್ಕಾರ ಮಾಡಬೇಕು ಅನ್ನೋದು ನಮ್ಮ ವಿನಂತಿ. ಇಲ್ಲವಾದರೆ ನಮ್ಮ ಪಕ್ಷದ ಕೆಲಸ ಮಾಡುತ್ತಾ ಮುಂದೆ ಹೋಗೋಕಾಗುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

- Advertisement -

Related news

error: Content is protected !!