Saturday, June 13, 2026
spot_imgspot_img
spot_imgspot_img

ಮಂಗಳೂರು: ಆಸ್ಪತ್ರೆ ಕೊಠಡಿಯಲ್ಲೇ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ ಗಾಯಾಳು; ಕಣ್ಣಾರೆ ಕಂಡ ಬಾಲಕಿ ಮೇಲೆ ಅತ್ಯಾಚಾರ

- Advertisement -
- Advertisement -

ಮಂಗಳೂರು: ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ನಡೆಸುತ್ತಿದ್ದಾಗ ನೋಡಬಾರದ ಭಂಗಿಯಲ್ಲಿ ನೋಡಿದಳೆಂದು ಅಪ್ರಾಪ್ತ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಮಹಿಳೆ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.

ಕುಲಶೇಖರದ ಮನ್ಸೂರ್ ಅಹ್ಮದ್‌ ಬಾಬಾ ಶೇಖ್ ಮತ್ತು ಆತನ ಪರಿಚಯದ ಸ್ನೇಹಿತ ಬಿಹಾರ ಮೂಲದ ಮುಂಬೈಯಲ್ಲಿ ವಾಸವಿರುವ ಅಬ್ದುಲ್ ಹಲೀಂ ಆಗಸ್ಟ್ 10ರಂದು ಬೈಕಿನಲ್ಲಿ ಕಾಸರಗೋಡಿಗೆ ಹೋಗಿ ಹಿಂತಿರುಗುತ್ತಿದ್ದಾಗ ಮಂಜೇಶ್ವರದ ಹೊಸಂಗಡಿ ಬಳಿ ಅಪಘಾತಕ್ಕೀಡಾಗಿದ್ದರು. ಗಾಯಗೊಂಡ ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮನ್ಸೂರ್ ಅಹ್ಮದ್‌ ಅವರ ಅಕ್ಕ ತನ್ನ ಇಬ್ಬರು ಹೆಣ್ಮಕ್ಕಳೊಂದಿಗೆ ಬಂದಿದ್ದರು. ಭಿನ್ನ ಸಾಮರ್ಥ್ಯದ ಅಪ್ರಾಪ್ತ ಮಗಳನ್ನು ಆಸ್ಪತ್ರೆಯಲ್ಲಿ ತಮ್ಮನ ಹೆಂಡತಿ ಶಮೀನಾ ಬಾನು ಜೊತೆ ಬಿಟ್ಟು ಮಂಜೇಶ್ವರ ಪೊಲೀಸ್ ಠಾಣೆಗೆ ಅಪಘಾತದ ಬಗ್ಗೆ ವಿಚಾರಿಸಲು ತೆರಳಿದ್ದರು. ಈ ವೇಳೆ ಗಾಯಾಳು ಮನ್ಸೂರ್ ಪತ್ನಿ ಶಮೀನಾ ಬಾನು ಜೊತೆ ಆರೋಪಿ ಹಲೀಂ ಸೆಕ್ಸ್ ಮಾಡಿದ್ದ, ಆಸ್ಪತ್ರೆಯಲ್ಲೇ ಇಬ್ಬರು ಸೆಕ್ಸ್ ಮಾಡುತ್ತಿದ್ದನ್ನು ಅಪ್ರಾಪ್ತ ಬಾಲಕಿ ನೋಡಿದ್ದಾಳೆ. ಬಳಿಕ ಆರೋಪಿ ಹಲೀಂ ಬಾಲಕಿ ಮೇಲೆಯೂ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಪ್ರತಿರೋಧ ಒಡ್ಡಿದಾಗ ಬಾಲಕಿಯ ಬಾಯಿ, ಕೈ ಹಿಡಿದು ಶಮೀನಾ ಬಾನು ಸಹಕರಿಸಿದ್ದಾಳೆ.

ಈ ಬಗ್ಗೆ ವಿಚಾರ ತಿಳಿದ ಅಪ್ರಾಪ್ತ ಹುಡುಗಿಯ ತಾಯಿ ಮಹಿಳಾ ಠಾಣೆಗೆ ದೂರು ನೀಡಿದ್ದು ಆರೋಪಿತ ತಮ್ಮನ ಹೆಂಡತಿ ಶಮೀನಾ ಬಾನು(22)ವನ್ನು ಪೊಲೀಸರು ಆಗಸ್ಟ್ 16ರಂದು ಬಂಧಿಸಿದ್ದು ಜೈಲಿಗೆ ತಳ್ಳಿದ್ದಾರೆ. ಇದೇ ವೇಳೆ, ಆರೋಪಿ ಅಬ್ದುಲ್ ಸಲೀಂ(37) ತಪ್ಪಿಸಿಕೊಳ್ಳಲು ಯತ್ನಿಸಿದ್ದು ಗೋವಾ ಮೂಲಕ ಮುಂಬೈಗೆ ತೆರಳುತ್ತಿದ್ದಾನೆಂಬ ಮಾಹಿತಿ ಪಡೆದ ಮಂಗಳೂರು ಪೊಲೀಸರು ಮಡಗಾಂವ್ ಪೊಲೀಸರ ಮೂಲಕ ಆಗಸ್ಟ್ 17ರಂದು ದಸ್ತಗಿರಿ ಮಾಡಿಸಿದ್ದಾರೆ

- Advertisement -

Related news

error: Content is protected !!