Friday, April 19, 2024
spot_imgspot_img
spot_imgspot_img

ಮಂಗಳೂರು: ಗೂಡ್ಸ್ ರೈಲಿನ ಮೇಲಕ್ಕೇರಿ ಡೇಂಜರಸ್ ಸೆಲ್ಫೀ- ವಿದ್ಯುತ್ ಶಾಕ್ ತಗುಲಿ ಅರ್ಧ ಸುಟ್ಟ ಬಾಲಕ!

- Advertisement -G L Acharya panikkar
- Advertisement -

ಮಂಗಳೂರು: ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫೀ ತೆಗೆಯಲು ಹೋದ ಹುಡುಗನೊಬ್ಬ ಕರೆಂಟ್ ಶಾಕಿಗೆ ಒಳಗಾಗಿ 50 ಶೇಕಡಾ ಸುಟ್ಟು ಹೋದ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆಯಲ್ಲಿ ನಡೆದಿದೆ.

ಜೋಕಟ್ಟೆ ನಿವಾಸಿ 16 ವರ್ಷದ ಬಾಲಕ ಮೊಹಮ್ಮದ್ ದಿಶಾನ್ ಈ ರೀತಿ ಕರೆಂಟ್ ಶಾಕ್ ಆಗಿರುವ ಬಾಲಕ ಎಂದು ರೈಲ್ವೇ ಪೊಲೀಸರು ಮಾಹಿತಿ ನೀಡಿದ್ದಾರೆ. ಎಲ್ ಪಿಜಿ ಗ್ಯಾಸ್ ಟ್ಯಾಂಕರ್ ಇದ್ದ ಗೂಡ್ಸ್ ರೈಲು ಎಂಆರ್ ಪಿಎಲ್ ಒಳಗೆ ಹೋಗಲು ಕ್ಲಿಯರೆನ್ಸ್ ಸಿಗುವುದಕ್ಕಾಗಿ ನಿನ್ನೆಯಿಂದ ಜೋಕಟ್ಟೆ ರೈಲು ನಿಲ್ದಾಣದಲ್ಲಿ ನಿಂತಿತ್ತು. ಇದನ್ನು ಗಮನಿಸಿದ ನಾಲ್ಕು ಸ್ಥಳೀಯ ಬಾಲಕರು ರೈಲಿನ ಮೇಲೆ ಹತ್ತಿದ್ದು ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ.

ಈ ವೇಳೆ, ರೈಲ್ವೇ ಇಲೆಕ್ಟ್ರಿಕ್ ಲೈನ್ ತಾಗಿದ್ದು ನೆಲಕ್ಕೆ ಎಸೆಯಲ್ಪಟ್ಟು ಸುಟ್ಟು ಹೋಗಿದ್ದಾನೆ. ಇದನ್ನು ಕಂಡ ಇತರೇ ನಾಲ್ವರು ಅಲ್ಲಿಂದ ಕೆಳಕ್ಕೆ ಹಾರಿದ್ದು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳು ಬಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜೋಕಟ್ಟೆಯಿಂದ ಪಣಂಬೂರು- ಮಂಗಳೂರು ಜಂಕ್ಷನ್ ವರೆಗೆ ರೈಲು ಹಳಿಯ ಮೇಲ್ಭಾಗದಿಂದ ಇಲೆಕ್ಟ್ರಿಕ್ ಲೈನ್ ಆಗಿದ್ದು ಇದರಲ್ಲಿ 25 ಸಾವಿರ ವೋಲ್ಟ್ ವಿದ್ಯುತ್ ಹರಿಯುತ್ತದೆ ಎನ್ನಲಾಗಿದೆ. ಈ ಲೈನ್ ತಾಗಿ ಕರೆಂಟ್ ಶಾಕ್ ಆಗಿದೆ ಎನ್ನಲಾಗುತ್ತಿದ್ದು ಬಾಲಕ ಚೂರು ತಾಗುತ್ತಲೇ ನೆಲಕ್ಕೆ ಬಿದ್ದಿದ್ದಾನೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಮತ್ತು ಬಜ್ಪೆ ಠಾಣೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಯಿಂದ ವಿದ್ಯುತ್ ಲೈನ್ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ರೈಲ್ವೇಯ ವಿದ್ಯುತ್ ಲೈನ್ ಬಳಿ ಯಾರೂ ಬರಬಾರದು. ಹತ್ತಿರ ಸುಳಿದರೂ ತೀವ್ರ ವಿದ್ಯುತ್ ಶಾಕ್ ಆಗುವ ಸಾಧ್ಯತೆ ಇದೆಯೆಂದು ತಿಳಿಸಿದ್ದಾರೆ. ನೇರ ಅಥವಾ ಪರೋಕ್ಷವಾಗಿ ಲೈನ್ ಟಚ್ ಆಗಬಾರದು. ಇತರೇ ವಸ್ತುಗಳ ಮೂಲಕವೂ ಟಚ್ ಆಗುವಂತಿಲ್ಲ.

ವಿದ್ಯುತ್ ಲೈನಲ್ಲಿ 25 ಸಾವಿರ ವೋಲ್ಟೇಜ್ ಇದ್ದು ಅಲ್ಲಲ್ಲಿ ಎಚ್ಚರಿಕೆ ಸೂಚನೆ ಫಲಕ ಹಾಕಲಾಗಿದೆ. ಮಳೆಗಾಲದಲ್ಲಿ ರೈಲ್ವೇ ತಂತಿಯ ಕೆಳಭಾಗದಲ್ಲಿ ಕೊಡೆ ಬಿಡಿಸಿಕೊಂಡು ನಡೆಯುವುದು ಕೂಡ ಅಪಾಯಕಾರಿ.

ಸಾರ್ವಜನಿಕರು ರೈಲು ಹಳಿಯ ವಿದ್ಯುತ್ ಕಂಬಕ್ಕಾಗಲೀ, ನಿಂತಿರುವ ಗೂಡ್ಸ್ ಇನ್ನಿತರ ರೈಲು ಬೋಗಿಗಾಗಲೀ ಮೇಲಕ್ಕೆ ಹತ್ತುವುದು ಅಪಾಯ ತರಲಿದೆ. ಯುವಕರು ರೈಲು ಮೇಲಕ್ಕೆ ಹತ್ತುವ ಸಾಹಸವನ್ನಂತೂ ಮಾಡಲೇ ಬಾರದು ಎಂದು ಪಾಲಕ್ಕಾಡ್ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

driving
- Advertisement -

Related news

error: Content is protected !!