Friday, May 3, 2024
spot_imgspot_img
spot_imgspot_img

ಮಂಗಳೂರು: ಕೆಲಸಕ್ಕಿದ್ದ ಯುವಕನನ್ನು ಸುಟ್ಟು ಕೊಲೆಗೈದ ಅಂಗಡಿ ಮಾಲೀಕ..!ವಿದ್ಯುತ್ ಶಾಕ್‌ ನಾಟಕ ಮಾಡಿದ್ದ ತೌಸಿಫ್ ಹುಸೈನ್ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

- Advertisement -G L Acharya panikkar
- Advertisement -

ಮಂಗಳೂರು: ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನೋರ್ವನನ್ನು ಬರ್ಬರವಾಗಿ ಕೊಲೆಗೈದ ಘಟನೆ ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನಲ್ಲಿ ನಡೆದಿದೆ. ಜಗ್ಗು (35) ಕೊಲೆಯಾದ ಯುವಕ.

ಅಂಗಡಿ ಮಾಲೀಕ ತೌಸಿಫ್ ಹುಸೈನ್ ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಜು.8) ಶನಿವಾರ ಬೆಳಗ್ಗೆ ತನ್ನ ಸ್ಟೋರಿನಲ್ಲಿ ಕೆಲಸಕ್ಕಿದ್ದ ಜಗ್ಗುವನ್ನು ಕ್ಷುಲ್ಲಕ ಕಾರಣಕ್ಕೆ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಕೊಟ್ಟು ಸುಟ್ಟು ಕೊಂದಿದ್ದಾನೆ.

ನಂತರ ಸಾಕ್ಷಿ ನಾಶ ಮಾಡುವ ಹಾಗೂ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಪರಾಹ್ನ 1.30 ರ ಸುಮಾರಿಗೆ ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್ ಸ್ಪರ್ಶವಾಗಿರುವುದಾಗಿ ತೌಸಿಫ್ ಹೇಳಿದ್ದಾನೆ. ಕೂಡಲೇ ಸ್ಥಳೀಯರು ಜಗ್ಗುವನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಕರಕೊಂಡು ಹೋದಾಗ ಆದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ನಂತರ ಪ್ರಕರಣ ದಾಖಲು ಮಾಡಿಕೊಂಡ ಪಾಂಡೇಶ್ವರ ಪೊಲೀಸರು ಕೂಲಂಕೂಷವಾಗಿ ತನಿಖೆಯನ್ನು ಆರಂಭಿಸಿದ್ದಾರೆ. ಆ ಸಂದರ್ಭ ಪರಿಸರದ ಸಾರ್ವಜನಿಕರನ್ನು ವಿಚಾರಿಸಿದಾಗ ಜಗ್ಗುವನ್ನು ಸ್ಟೋರ್ ಮಾಲಿಕ ತೌಸಿಫನೇ ಕೊಲೆ ಮಾಡಿದ್ದರ ಬಗ್ಗೆ ಬಲವಾದ ಸಾಕ್ಷ್ಯಗಳು ದೊರೆತ್ತಿದ್ದು ಆರೋಪಿ ತೌಸಿಫ್ ಹುಸೈನ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!