Wednesday, April 24, 2024
spot_imgspot_img
spot_imgspot_img

ಮಂಗಳೂರು: ದ.ಕ ಜಿಲ್ಲೆಯನ್ನೂ ಅನ್‌ಲಾಕ್ ಮಾಡುವಂತೆ ಒತ್ತಾಯ; ಜಿಲ್ಲಾಡಳಿತ ಕಚೇರಿ ಮುಂದೆ ವ್ಯಾಪಾರಸ್ಥರ ಧಿಡೀರ್ ಪ್ರತಿಭಟನೆ!!

- Advertisement -G L Acharya panikkar
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನೂ ಅನ್‌ಲಾಕ್ ಮಾಡುವಂತೆ ಒತ್ತಾಯಿಸಿ ಇಂದು ಬೆಳಿಗ್ಗೆ ಜಿಲ್ಲಾಡಳಿತ ಕಚೇರಿ ಮುಂದೆ ವ್ಯಾಪಾರಸ್ಥರು ಧಿಡೀರ್ ಪ್ರತಿಭಟನೆ ನಡೆಸಿದರು.

ಜವಳಿ ಹಾಗೂ ಚಪ್ಪಲಿ ಅಂಗಡಿ ಮಾಲಕರು ಅಂಗಡಿ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ನೂರಾರು ಸಂಖ್ಯೆಯಲ್ಲಿದ್ದ ವರ್ತಕರು, ಕೆಲಸಗಾರರು ಕಳೆದ 2 ತಿಂಗಳಿನಿಂದ ಕೆಲಸವಿಲ್ಲದೆ ದಿನದೂಡುತ್ತಿದ್ದು, ಲಾಕ್ ಡೌನ್ ನಿಂದಾಗಿ ಜನ ಸಂಕಷ್ಟಗೊಳಗಾಗುತ್ತಿದ್ದಾರೆ. ತಮಗೆ ವ್ಯಾಪಾರ ಮಾಡಲು ಅವಕಾಶ ಕೋರಿ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಯವರು ಜುಲೈ 5 ರವರೆಗೆ ಹಾಫ್ ಲಾಕ್ ಡೌನ್ ಘೋಷಿಸಿ, ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 1 ಗಂಟೆಯವರೆಗೆ ಅವಕಾಶದ ಆದೇಶ ಹೊರಡಿಸಿದ್ದರು.ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಾರದ ಬಳಿಕ ಜಿಲ್ಲೆಯಲ್ಲಿ ಪೂರ್ಣ ಲಾಕ್ ಡೌನ್ ಸಡಿಲಿಕೆಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.

ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 7.5 ರಿಂದ 5.5 ಕ್ಕೆ ಕುಸಿದಿದೆ. ಮೂರು ನಾಲ್ಕು ದಿನಗಳಲ್ಲಿ ಜನತೆ ಕಟ್ಟುನಿಟ್ಟಿನ ಲಾಕ್ ಡೌನ್ ಕೈಗೊಂಡರೆ ಶೇ 3 ರಿಂದ 4 ಕ್ಕೆ ಪಾಸಿಟಿವಿಟಿ ದರ ಇಳಿಯಬಹುದು. ಆವಾಗ ಪೂರ್ಣ ಲಾಕ್ ಡೌನ್ ಸಡಿಲಿಕೆಗೆ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.

ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭಿಸುವಂತೆ ಜನಸಾಮಾನ್ಯರು ಒತ್ತಾಯಿಸುತ್ತಿದ್ದು ವಾರದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಜವಳಿ ಮಳಿಗೆ ವರ್ತಕರು ಅಂಗಡಿ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ 2-3 ದಿನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಉಸ್ತುವಾರಿ ಮಂತ್ರಿ ಕೋಟಾ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ದಾರೆ.

ವಾರದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ಣ ಲಾಕ್ ಡೌನ್ ಸಡಿಲಿಕೆಗೆ ಗಂಭೀರ ಚಿಂತನೆ ನಡೆಯುತ್ತಿದೆ. ರಾಜ್ಯ ಸರಕಾರ ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಜೂ.21ರಿಂದ ಶೇ.50ರಷ್ಟು ಸಾರಿಗೆ ಸಹಿತ ಸಂಪೂರ್ಣ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಆದರೆ ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಕಾರಣಕ್ಕೆ ದ.ಕ ಜಿಲ್ಲೆಯನ್ನು ಆ ಪಟ್ಟಿಯಿಂದ ಕೈಬಿಟ್ಟಿದೆ.

- Advertisement -

Related news

error: Content is protected !!