Saturday, June 13, 2026
spot_imgspot_img
spot_imgspot_img

ಮಾಜಿ ಸಚಿವ ಯು. ಟಿ ಖಾದರ್ ಕಾರ್ ಬೆನ್ನಟ್ಟಿದ ಅಪರಿಚಿತ !- ಪೊಲೀಸರಿಂದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಸಂಚರಿಸುತ್ತಿದ್ದ ಕಾರನ್ನು ಹಿಂಬಾಲಿಸಿದ್ದ ಬೈಕ್ ಸವಾರನನ್ನು ಪೋಲೀಸರು ಬಂಧಿಸಿದ್ದಾರೆ.ಅನೀಶ್ ಪೂಜಾರಿ ಬಂಧಿತ ವ್ಯಕ್ತಿಯಾಗಿದ್ದು ಪೋಲೀಸರು ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಈತ ನಿನ್ನೆ ಯು.ಟಿ ಖಾದರ್ ವಿಮಾನ ನಿಲ್ದಾಣ ಮಾರ್ಗವಾಗಿ ತೆರಳುತ್ತಿರುವಾಗ ಮಂಗಳೂರು ಹೊರವಲಯದ ದೇರಳಕಟ್ಟೆಯಿಂದ ನಂತೂರು ಜಂಕ್ಷನ್​ವರೆಗೆ ಹಿಂಬಾಲಿಸಿದ್ದಾನೆ. ಇದನ್ನು  ಗಮನಿಸಿದ ಎಸ್ಕಾರ್ಟ್​ನಲ್ಲಿದ್ದ ಪೊಲೀಸರು, ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಬೈಕ್​ ಸವಾರ ನಂತೂರು ಸರ್ಕಲ್​​ನಲ್ಲಿ ರಾಂಗ್ ಸೈಡ್​​ನಲ್ಲಿ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.

- Advertisement -

Related news

error: Content is protected !!