Wednesday, October 21, 2026
spot_imgspot_img
spot_imgspot_img

ಗೋಡೆ ಬರಹ ಬರೆದವರ ವಿರುದ್ಧ ಕಠಿಣ ಕ್ರಮ ಅಗತ್ಯವಿದೆ- ಯು. ಟಿ ಖಾದರ್

- Advertisement -
- Advertisement -

ಮಂಗಳೂರು: ಗೋಡೆ ಬರಹದ ಮೂಲಕ ಕಿಡಿಗೇಡಿ ಕೃತ್ಯ ನಡೆಸಿದವರು ಸಮಾಜ ದ್ರೋಹಿಗಳು, ದೇಶದ್ರೋಹಿಗಳು. ಇವರನ್ನು ಹಿಡಿದು ಬೇರೆ ದೇಶಕ್ಕೆ ಬಿಟ್ಟು ಬರಬೇಕು ಎಂದು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಯು.ಟಿ ಖಾದರ್ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಖಾದರ್ ಗೋಡೆ ಬರಹ ಬರೆದಿರುವ ಕೃತ್ಯವನ್ನ ತೀವ್ರವಾಗಿ ಖಂಡಿಸುತ್ತೇನೆ. ಇದನ್ನ ಯಾರೇ ಮಾಡಿರಲಿ, ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕೂಡಲೇ ಈ ದೇಶದ್ರೋಹಿಗಳನ್ನು ಬಂಧಿಸಬೇಕು. ಇವರನ್ನು ಪತ್ತೆ ಮಾಡುವುದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿ. ಇವರ ಹಿಂದೆ ಯಾರಿದ್ದಾರೆ, ಅವರನ್ನೂ ಬಂಧಿಸಬೇಕು. ಅವರನ್ನು ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ ಎಂದು ಹೇಳಿದರು.

ಒಂದು ವಾರದ ಒಳಗೆ ಈ ಆರೋಪಿಗಳ ಪತ್ತೆಯಾಗಬೇಕು. 15 ದಿನದ ಒಳಗೆ ಬಂಧನ ಆಗದೇ ಇದ್ರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ. ಅವರು ಮಾನಸಿಕ ಅಸ್ವಸ್ಥ ಆಗಿರಲಿ, ಯಾರೇ ಆಗಿರಲಿ ಅರೆಸ್ಟ್ ‌ಮಾಡಿ ಎಂದು ಆಗ್ರಹಿಸಿದರು‌.

- Advertisement -

Related news

error: Content is protected !!