Friday, June 19, 2026
spot_imgspot_img
spot_imgspot_img

ವಿವಾದಿತ ಬರಹವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಪ್ರತಿಭಟನೆ

- Advertisement -
- Advertisement -

ಮಂಗಳೂರು: ಮಂಗಳೂರಿನ ಗೋಡೆಯೊಂದರಲ್ಲಿ ‘ಲಷ್ಕರ್ ಝಿಂದಾಬಾದ್’ ಗೋಡೆ ಬರಹವನ್ನು ವಿರೋಧಿಸಿ ಕದ್ರಿ ಮಲ್ಲಿಕಟ್ಟೆಯಲ್ಲಿ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ವಿಶ್ವ ಹಿಂದೂ ಪರಿಷತ್, ಭಜರಂಗದಳ ಪ್ರತಿಭಟನೆಯನ್ನು ನಡೆಸಿದರು. ದೇಶವಿರೋಧಿ ಗೋಡೆಬರಹ ಬರೆದವರ ಬಂಧನಕ್ಕೆ ಆಗ್ರಹಿಸಿದರು. ಸರ್ಕ್ಯೂಟ್ ಹೌಸ್ ರಸ್ತೆ ಬಳಿಯ ಖಾಸಗಿ ಅಪಾರ್ಟ್ಮೆಂಟ್ ಗೋಡೆಯೊಂದರಲ್ಲಿ ನಮ್ಮನ್ನು ವಿದ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ ಲಷ್ಕರ್ ಇ ತೊಯಿಬಾ ಮತ್ತು ತಾಲಿಬಾನ್ ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದು ತಿಳಿದಿದೆ ಎಂದು ಬರೆಯಲಾಗಿತ್ತು.

ಮಧ್ಯರಾತ್ರಿ ಕಿಡಿಗೇಡಿಗಳಿಂದ ಕೃತ್ಯ ಎಸಗಿರುವ ಶಂಕೆಯಿದೆ. ಕದ್ರಿ ಪೊಲೀಸರು ಗೋಡೆ ಬರಹಗಳನ್ನು ಅಳಿಸಿ ಹಾಕಿ ತನಿಖೆ ನಡೆಸುತಿದ್ದಾರೆ.

- Advertisement -

Related news

error: Content is protected !!