Tuesday, May 14, 2024
spot_imgspot_img
spot_imgspot_img

ರಷ್ಯಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಆರೋಪಿ ಗದಗದಲ್ಲಿ ಸೆರೆ

- Advertisement -G L Acharya panikkar
- Advertisement -

ಉತ್ತರ ಗೋವಾದ ಅರಂಬೋಲ್‌ನಲ್ಲಿರುವ ರೆಸಾರ್ಟ್‌ನಲ್ಲಿ 12 ವರ್ಷದ ರಷ್ಯಾದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಕರ್ನಾಟಕದ ಗದಗದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ರವಿ ಲಮಾಣಿ (28) ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, ಮೇ 6 ರಂದು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ನಡೆಸಿ ಸ್ವಂತ ಊರಿಗೆ ಪರಾರಿಯಾಗಿದ್ದ ಈತನನ್ನು ಮೇ 10 ರಂದು ಪೆರ್ನೆಮ್ ಪೊಲೀಸರ ತಂಡ ಗದಗ್‌ನಲ್ಲಿ ಬಂಧಿಸಿದೆ. ಅರಂಬೋಲ್‌ ರೆಸಾರ್ಟ್‌ನಲ್ಲಿ ರೂಮ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಅಪ್ರಾಪ್ತ ಮಗಳ ಮೇ 6 ರಂದು ಮೇಲೆ ರೆಸಾರ್ಟ್‌ನ ಈಜುಕೊಳದಲ್ಲಿ ಹಾಗೂ ಹೋಟೆಲ್ ಕೊಠಡಿಯೊಳಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಮೇ 9 ರಂದು ದೂರು ದಾಖಲಿಸಿದ್ದರು.

ದೂರಿನ ಪ್ರಕಾರ, ಬಾಲಕಿಯ ತಾಯಿ ಅರಂಬೋಲ್‌ನ ಹತ್ತಿರದ ಮಾರುಕಟ್ಟೆಯಿಂದ ಕೆಲವು ಅಗತ್ಯ ವಸ್ತುಗಳನ್ನು ತರಲು ಹೊರಗೆ ಹೋಗುವಾಗ ಮಗಳನ್ನು ಈಜುಕೊಳದಲ್ಲಿ ಬಿಟ್ಟು ಹೋಗಿದ್ದರು, ಆಗ ಈ ಘಟನೆ ನಡೆದಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಲಮಾಣಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ), ಗೋವಾ ಮಕ್ಕಳ ಕಾಯ್ದೆಯ ಸೆಕ್ಷನ್ 8 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!