Friday, April 19, 2024
spot_imgspot_img
spot_imgspot_img

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ವತಿಯಿಂದ ವಿವೇಕ ಸ್ಪರ್ಧೆ -2021 ಹಾಗೂ ರಕ್ತದಾನ ಶಿಬಿರ

- Advertisement -G L Acharya panikkar
- Advertisement -

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಆಯೋಜಿಸಿದ್ದ ವಿವೇಕ ಸ್ಪರ್ಧೆ -2021 ಹಾಗೂ ರಕ್ತದಾನ ಶಿಬಿರವನ್ನು ಮಂಗಳೂರಿನ ಖ್ಯಾತ ಉದ್ಯಮಿಯಾದ ಪುಷ್ಪರಾಜ್ ಜೈನ್ ಅವರು ಉದ್ಘಾಟಿಸಿ ವಿವೇಕಾನಂದರ ಆದರ್ಶದೊಂದಿಗೆ ನಡೆಯುತ್ತಿರುವ ಈ ವಿದ್ಯಾರ್ಥಿ ಸಂಘಟನೆ ಸಮಾಜಕ್ಕೆ ಉತ್ತಮ ವ್ಯಕ್ತಿತ್ವವುಳ್ಳ ನಾಗರಿಕರನ್ನು ನೀಡುತ್ತಿದೆ.ಇಂತಹ ಸಂಘಟನೆಯ ಸಂಪರ್ಕದಲ್ಲಿರಲು ನಾನು ಬಯಸುತ್ತೇನೆ ಎಂದು ಉದ್ಘಾಟನಾ ನುಡಿಗಳನ್ನಾಡಿದರು.


ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರವೀಂದ್ರನಾಥ ರೈ ಅವರು ಉಪಸ್ಥಿತರಿದ್ದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ದೀಪ್ತಿ , ನಗರ ಅಧ್ಯಕ್ಷೆ ಭಾರತಿ ಪ್ರಭು , ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಬರ್ಕೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಜ್ಯೋತಿರ್ಲಿಂಗ ಅವರು ಮಾತನಾಡಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ ಸಂತನ ಜಯಂತಿಯನ್ನು ಆಚರಿಸುವುದರೊಂದಿಗೆ ನಾವೆಲ್ಲರೂ ಈ ಸಂಸ್ಕೃತಿಯನ್ನು ಸಂಸ್ಕಾರದೊಂದಿಗೆ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದು ಹೇಳಿ ಜಾನಪದ ಗೀತೆಯನ್ನು ಹಾಡಿ ಸಂಸ್ಕಾರದ ಅಗತ್ಯದ ಬಗ್ಗೆ ಹೇಳಿದರು.

ರಕ್ತದಾನ ಶಿಬಿರದಲ್ಲಿ ನಲವತ್ತೈದು ಯೂನಿಟ್ ರಕ್ತವನ್ನು ವಿದ್ಯಾರ್ಥಿಗಳು ನೀಡಿದರು. ಸ್ಪರ್ಧೆಯಲ್ಲಿ 80 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ನಗದು ಪುಸ್ತಕ ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ವಿಭಾಗ ಪ್ರಮುಖರಾದ ಕೇಶವ ಬಂಗೇರ , ಪ್ರಾಂತ ಕಾರ್ಯ ಸಮಿತಿ ಸದಸ್ಯ ಮಣಿಕಂಠ ಕಳಸ, ತಾಲ್ಲೂಕು ಸಂಚಾಲಕ ನಿಶಾನ್ ಆಳ್ವ ಉಪಸ್ಥಿತರಿದ್ದರು.

- Advertisement -

Related news

error: Content is protected !!