Thursday, September 3, 2026
spot_imgspot_img
spot_imgspot_img

ಮಂಗಳೂರು: ವಿವಾಹಿತ ಮಹಿಳೆ ನಾಪತ್ತೆ; ಪತಿಯಿಂದ ದೂರು ದಾಖಲು!

- Advertisement -
- Advertisement -
driving

ಮಂಗಳೂರು: ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಚ್‌ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೋರ್ವಳು ನಾಪತ್ತೆಯಾಗಿರುವ ಘಟನೆ ಮಂಗಳೂರು ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆ ವೆಲೆನ್ಸಿಯ ನಿವಾಸಿ ವಿಜಯಲಕ್ಷ್ಮಿ (26) ಎನ್ನಲಾಗಿದೆ.

ನಾಪತ್ತೆಯಾದ ಮಹಿಳೆ ಪತಿ ನಾಗೇಶ್ ಹಾಗೂ ಇಬ್ಬರು ಮಕ್ಕಳೊಂದಿಗೆ ನಗರದ ವೆಲೆನ್ಸಿಯಾದ ಸುವರ್ಣ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಎಂಟು ವರ್ಷಗಳಿಂದ ವಾಸವಿದ್ದರು. ಪತಿ ನಾಗೇಶ್ ಅವರು ರವಿ ಎಂಬವರಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ವಿಜಯಲಕ್ಷ್ಮಿ ತಾವು ವಾಸವಾಗಿದ್ದು, ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಚ್‌ಮೆನ್‌ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪ್ರತಿನಿತ್ಯದಂತೆ ನಾಗೇಶ್ ಚಾಲಕ ವೃತ್ತಿಗೆ ತೆರಳಿದ್ದು, ಮಧ್ಯಾಹ್ನ ಸಮಯದಲ್ಲಿ ನಾಗೇಶ್ ವಾಸವಿದ್ದ, ಅಪಾರ್ಟ್‌ಮೆಂಟ್‌ನಿಂದ ಫೋನ್ ಕರೆ ಬಂದಿದ್ದು, ಪತ್ನಿ ಮನೆಯಲ್ಲಿ ಇಲ್ಲ, ಜನರೇಟರ್ ಆನ್ ಮಾಡಲೆಂದು ತಿಳಿಸಿದ್ದರು. ಇರುವ ಕೆಲಸ ಬಿಟ್ಟು ಅಪಾರ್ಟ್‌ಮೆಂಟ್‌ಗೆ ತೆರಳಿದ ನಾಗೇಶ್ ಮನೆಯಲ್ಲಿ ಹುಡುಕಾಡಿದರೂ ಪತ್ನಿ ಇರಲಿಲ್ಲ ಹಾಗೂ ಆಕೆಯ ಫೋನ್‌ಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್‌ ಆಫ್ ಎಂದು ಬಂದಿದೆ.

ಮಕ್ಕಳು ಇಬ್ಬರನ್ನೂ ಬಿಟ್ಟು ಕಾಣೆಯಾಗಿರುವುದು ಕಂಡುಬಂದಿದೆ. ಸಂಬಂಧಿಕರು, ನೆರೆಹೊರೆಯವರಲ್ಲಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ನಾಗೇಶ್ ಅವರು ಮಂಗಳೂರು ದಕ್ಷಿಣ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!