Sunday, January 24, 2021

ಸ್ವಾಮೀ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವಮೋರ್ಚಾ ಮಂಗಳೂರು ನಗರ ದಕ್ಷಿಣ ಇದರ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಮಂಗಳೂರು: ಸ್ವಾಮೀ ವಿವೇಕಾನಂದರ 158ನೇ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವಮೋರ್ಚಾ ಮಂಗಳೂರು
ನಗರ ದಕ್ಷಿಣ ಇದರ ವತಿಯಿಂದ ಚಿಲಿಂಬಿಗುಡ್ಡೆ ಶ್ರೀ ರಾಮಂಜನೇಯ ಯುವಕ ಮಂಡಲದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್ , ವೈದ್ಯಕೀಯ ಪ್ರಕೋಷ್ಟದ ಜಿ ಕೆ ಭಟ್ ಯುವಮೋರ್ಚಾದ ಅಧ್ಯಕ್ಷರಾದ ಸಚಿನ್ ರಾಜ್ ರೈ ರವರು ನೆರವೇರಿಸಿದರು. ಅತಿಥಿಗಳಿಗೆ ಸ್ವಾಮೀ ವಿವೇಕಾನಂದರ “ಕೊಲೊಂಬೋದಿಂದ ಅಲ್ಮೊರಕ್ಕೆ ” ಪುಸ್ತಕವನ್ನು ಸ್ಮರಣಿಕೆಯಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷರು, ಪ್ರಭಾರಿಗಳಾದ ವಿನ್ಯಾಸ್ ಶೆಟ್ಟಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಅಮಿತ್ ರಾಜ್ ಹಾಗೂ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಉಪಾಧ್ಯಕ್ಷರಾದ ರಮೇಶ್ ಹೆಗ್ಡೆ , ಕಾರ್ಯದರ್ಶಿಗಳಾದ ಸುರೇಖಾ ಹೆಗ್ಡೆ ಮಹಾಶಕ್ತಿ ಕೇಂದ್ರದ ಉಪಾಧ್ಯಕ್ಷರಾದ ಚರಿತ್ ಪೂಜಾರಿ ಮನಪಾ ಸದಸ್ಯರಾದ ಜಯಲಕ್ಷ್ಮೀ .ವಿ . ಶೆಟ್ಟಿ , ರಾಮಂಜನೇಯ ಯುವಕ ಮಂಡಲದ ಅಧ್ಯಕ್ಷರಾದ ದಿನೇಶ್, ಗೌರವಾಧ್ಯಕ್ಷರಾದ ಗುರುದತ್ ಕೋಟ್ಯಾನ್ ಹಾಗೂ ಯುವಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ರಾಮಂಜನೇಯ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

- Advertisement -

MOST POPULAR

HOT NEWS

Related news

error: Content is protected !!