Friday, October 23, 2026
spot_imgspot_img
spot_imgspot_img

ಮಂಗಳೂರು: ತಾಲಿಬಾನ್ ಅಟ್ಟಹಾಸ; ಸುರಕ್ಷಿತವಾಗಿ ತವರು ಸೇರಿದ 4 ಮಂದಿ

- Advertisement -
- Advertisement -

ಮಂಗಳೂರು: ಕಾಬೂಲಿನ ಮಿಲಿಟರಿ ಏರ್ ಬೇಸ್ ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ನಾಲ್ಕು ಮಂದಿ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಕಾಬೂಲಿನ ನ್ಯಾಟೋ ಏರ್ ಬೇಸ್ ನಲ್ಲಿ ಕೆಲಸಕ್ಕಿದ್ದ ನಾಲ್ವರನ್ನು ಅಮೆರಿಕದ ವಾಯುಪಡೆ ಆಗಸ್ಟ್ 17 ರಂದು ಕತಾರ್ ಗೆ ಏರ್ ಲಿಫ್ಟ್ ಮಾಡಿತ್ತು. ಅಲ್ಲಿಂದ ಭಾರತದ ವಾಯುಪಡೆ ವಿಮಾನ ಭಾನುವಾರ ದೆಹಲಿಗೆ ಕರೆತಂದಿತ್ತು.

ಮೂಡುಬಿದ್ರೆಯ ಜಗದೀಶ ಪೂಜಾರಿ, ಬಜ್ಪೆಯ ದಿನೇಶ್ ರೈ, ಕಿನ್ನಿಗೋಳಿ ಪಕ್ಷಿಕೆರೆಯ ಡೆಸ್ಮಂಡ್ ಡೇವಿಡ್ ಡಿಸೋಜ, ಮಂಗಳೂರು ಉರ್ವದ ಶ್ರವಣ್ ಅಂಚನ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ದೆಹಲಿಯಿಂದ ಕಳೆದ ರಾತ್ರಿ 8.30 ಕ್ಕೆ ಆಗಮಿಸಿದ ವಿಮಾನದಲ್ಲಿ ಸುರಕ್ಷಿತವಾಗಿ ತಾಯ್ನಾಡು ತಲುಪಿದ್ದಾರೆ. ಇವೆರೆಲ್ಲ 2011 ರಲ್ಲಿ ಉದ್ಯೋಗಕ್ಕೆಂದು ಕಾಬೂಲ್ ಮಿಲಿಟರಿ ಬೇಸ್ ಗೆ ತೆರಳಿದ್ದರು. ದಿನೇಶ್ ರೈ ಮೆಕ್ಯಾನಿಕ್ ಆಗಿದ್ದರೆ, ಇತರರು ಬೇರೆ ಬೇರೆ ಉದ್ಯೋಗದಲ್ಲಿದ್ದರು.

- Advertisement -

Related news

error: Content is protected !!