ಮಂಗಳೂರು: ಜಿಲ್ಲೆಯಾದ್ಯಂತ ವಯೋವೃದ್ಧ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಲವು ಬಾರಿ ಕಳ್ಳತನ ಹಾಗೂ ವಂಚನೆ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುರೇಶ್ ಅಲಿಯಾಸ್ ಸಂತೋಷ್ (60) ಎಂದು ಗುರುತಿಸಲಾಗದೆ.
ಮೂಡುಬಿದಿರೆಯಲ್ಲಿ ಪರಿಚಯಸ್ಥನಂತೆ ನಟಿಸಿ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದ, ಹೀಗೆ ಹಲವು ಕಳ್ಳತನ ಪ್ರಕರಣ ನಡೆಸಿದ್ದ ಎಂದು ತಿಳಿದುಬಂದಿದೆ.
ಬಂಧಿತನಿಂದ 2.50 ಲಕ್ಷ ರೂ. ಮೌಲ್ಯದ 36 ಗ್ರಾಂ ತೂಕದ 2 ಚಿನ್ನದ ಸರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸುಂದರಿ ಪೂಜಾರಿ ಎಂಬವರು ತನ್ನ ಮಗಳ ಮನೆಗೆ ಹೋಗಲೆಂದು ಮೂಡುಬಿದಿರೆ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ವೇಳೆ ಅಪರಿಚಿತನೋರ್ವ ಬಂದು ಪರಿಚಯಸ್ಥನಂತೆ ಮಾತನಾಡಿ, ತಮ್ಮ ಕೊರಳಿನಲ್ಲಿರುವಂತ ಸರ ಮಾಡಲಿದೆ ಎಂದು ಹೇಳಿ ಅವರ ಕುತ್ತಿಗೆಯಕಲ್ಲಿದ್ದ 2 ಪವನ್ ತೂಕದ ಸರವನ್ನು ಕಳವುಗೈದು ಪರಾರಿಯಾಗಿದ್ದ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿದ ಪೊಲೀಸರು, 2023ರಲ್ಲಿ ಕಾರ್ಕಳ ತಾಲೂಕು ಕಸಬ, ಮಣ್ಣು ಗೋಪುರದ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯನ್ನು ವಂಚನೆ ಮಾಡಿ ಪಡೆದಿದ್ದ ಒಂದುವರೇ ಪವನ್ ತೂಕದ ಹವಳ ಇರುವ ಚಿನ್ನದ ಸರ, ಸುಂದರಿ ಪೂಜಾರಿಯವರಿಂದ ಕಳವುಗೈದಿದ್ದ ಚಿನ್ನದ ಸರ ಸೇರಿ ಒಟ್ಟು 36 ಗ್ರಾಂ ತೂಕದ 2 ಚಿನ್ನದ ಸರಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.