Thursday, November 5, 2026
spot_imgspot_img
spot_imgspot_img

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ!

- Advertisement -
- Advertisement -

ಮಂಗಳೂರು: ಹೊಸ ವರ್ಷಾಚರಣೆಗೆಂದು ಮಾರಾಟ ಮಾಡಲು ತಂದಿದ್ದ ಸುಮಾರು 21 ಕೆ.ಜಿ 450 ಗ್ರಾಂ ತೂಕದ ಗಾಂಜಾ ವಶ, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳ ಬಂಧನ.

ಜ.3 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ, 2ನೇ ಕ್ರಾಸ್ ನ ಬೆನಕ ಎಂಬ ಹೆಸರಿನ ಮನೆಯ ಬಳಿ ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಪಡೆದ ಪೋಲಿಸರು ಸ್ಥಳಕ್ಕೆ ದಾವಿಸಿ, ಮಂಗಳೂರಿನ ಗುರುಪುರ ಉಳಾಯಿಬೆಟ್ಟು ನಿವಾಸಿ ದಿ/ನಾರಾಯಣ ಪೂಜಾರಿಯ ಪುತ್ರ, ಪ್ರದೀಪ್ ಪೂಜಾರಿ(32), ಮಂಗಳೂರಿನ ಚಿತ್ರಪುರ ನಿವಾಸಿ ಕೆ.ವೆಂಕಪ್ಪ ಪೂಜಾರಿಯ ಪುತ್ರ ವಸಂತ (42)ಅವರ ವಶದಲ್ಲಿದ್ದ ಸುಮಾರು 21 ಕೆ.ಜಿ 450 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 10,72,500) ಮತ್ತು 3 ಮೊಬೈಲ್ ಪೋನ್ (ಅಂದಾಜು ಮೌಲ್ಯ ರೂ. 7,000) ನ್ನು ಹಾಗೂ ಗಾಂಜಾ ಸಾಗಿಸಲು ಬಳಸಿದ ಕೆ.ಎ. 04 ಎಂ.ಡಿ 2532 ನಂಬ್ರದ ಸ್ವೀಫ್ಟ್ ಕಾರನ್ನು (ಅಂದಾಜು ಮೌಲ್ಯ ರೂ. 3,00,000) ಹಾಗೂ ಗಾಂಜಾ ಸಂಗ್ರಹಿಸಿದ್ದ 3 ಲಗೇಜ್ ಬ್ಯಾಗ್ (ಅಂದಾಜು ಮೌಲ್ಯ ರೂ. 3,000), ಗಾಂಜಾ ಸೇವಿಸಲು ಬಳಸುವ ಸ್ಟ್ರೀಫ್ಸ್-2, ಹಾಗೂ ನಗದು ಹಣ 1,000 ಗಳನ್ನು ಸ್ವಾಧೀನಪಡಿಸಿಕೊಂಡಿಸಿದ್ದಾರೆ.

ಆರೋಪಿಗಳು ಗಾಂಜಾವನ್ನು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಡಿ.29 ರಂದು ಓರಿಸ್ಸಾದಿಂದ ತಂದಿರುವುದಾಗಿ ತಿಳಿಸಿದ್ದು, ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇದ್ದುದರಿಂದ ಮಾರಾಟ ಮಾಡಲು ಸಾಧ್ಯವಾಗದೇ ಅದನ್ನು ಕಾರಿನಲ್ಲಿಯೇ ಇಟ್ಟಿರುವುದಾಗಿ ಆರೋಪಿಗಳು ತಿಳಿಸಿರುತ್ತಾರೆ. ಆರೋಪಿಗಳಿಂದ ಸ್ವಾಧೀನಪಡಿಸಿಕೊಳ್ಳಲಾದ ಗಾಂಜಾ, ಕಾರು ಮತ್ತು ಇತರೆ ವಸ್ತುಗಳ ಒಟ್ಟು ಮೌಲ್ಯ 13,86,500 ರೂಗಳಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026 ಕಲಂ: 8(C), 20(b)(ii),(C) NDPS Act ನಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.

ಆರೋಪಿ ಪ್ರದೀಪ್ ಪೂಜಾರಿ ವಿರುದ್ದ ಈ ಕೆಳಗಿನಂತೆ ಪ್ರಕರಣಗಳು ದಾಖಲಾಗಿರುತ್ತವೆ.
1)Bajpe PS -84/2020 u/s 379 ipc
2) Bajpe PS -90/2020 u/s 379 IPC
3) Barke ps-93/2015 u/s 143,144,302,147,148,149,332,353,324,307, IPC
4)Belthangady- 43/2020 379 IPC
5)Darmastal ps-56/2019 u/s 8(c)20(b) Ndps act
6)mulki PS -52/2018 u/s 399,400,402,120(b) IPC 4,20,25,1(B)(b) arms act
7) surathkal PS -92/2023 u/s 8(c)20(b) ndps act
8) north PS -177/15 u/s 307 ipc

ಸದ್ರಿ ಪತ್ತೆ ಕಾರ್ಯದಲ್ಲಿ ಉತ್ತರ ಉಪ ವಿಭಾಗದ ಎ.ಸಿ.ಪಿ. ಶ್ರೀ ಶ್ರೀಕಾಂತ.ಕೆ. ರವರು ಮತ್ತು ಅವರ ತಂಡದ ಸಿಬ್ಬಂದಿಗಳಾದ ಎ.ಎಸ್.ಐ ಚಂದ್ರಶೇಖರ್, ಹೆಚ್.ಸಿ ಗಳಾದ ರೆಜಿ.ಎಂ., ದಾಮೋದರ್, ಹಾಲೇಶ್ ನಾಯ್ಕ್, ಸುನೀಲ್ ಪಡನಾಡ, ಸಂಪತ್ ಹಾಗೂ ಸುರತ್ಕಲ್ ಠಾಣಾ ಪಿ.ಐ. ಶ್ರೀ ಪ್ರಮೋದ್ ಕುಮಾರ್, ಪಿ.ಎಸ್.ಐ ರಘುನಾಯ್ಕ್ ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ಅಂಜಿನಪ್ಪ ರವರು ಭಾಗವಹಿಸಿರುತ್ತಾರೆ.

- Advertisement -

Related news

error: Content is protected !!