Tuesday, July 21, 2026
spot_imgspot_img
spot_imgspot_img

ಮಂಗಳೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ, ನಗರದ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಸಮಾರಂಭ

- Advertisement -
- Advertisement -

ಮಂಗಳೂರು: 2026 ನೇ ಸಾಲಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ, ಮಂಗಳೂರು ನಗರದ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಸಮಾರಂಭವನ್ನು ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಸ್ಸು, ಆಟೋ ಸಂಘದ ಪದಾಧಿಕಾರಿಗಳು, ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದು, ಸಮಾರಂಭದಲ್ಲಿ ಜೆಪ್ಪಿನಮೊಗೆರು ಯೆನೆಪೋಯಾ ಸ್ಕೂಲ್ನ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ಬೀದಿನಾಟಕ ಪ್ರದರ್ಶನವನ್ನು ನಡೆಸಿ ಕೊಟ್ಟಿರುತ್ತಾರೆ. ಮಂಗಳೂರು ನಗರದಲ್ಲಿ ನಡೆದಂತಹ ಕೆಲವು ಅಪಘಾತಗಳ ಲೈವ್ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಮನವರಿಕೆ ಮಾಡಲಾಯಿತು ವರದಿ ಮೂಲಕ ತಿಳಿದು ಬಂದಿದೆ

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ ಐ.ಪಿ.ಎಸ್. ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾದ ಚಲನಚಿತ್ರ ನಟ ತೆಲಿಕೆದ ಬೊಳ್ಳಿ ಡಾ. ಶ್ರೀ ದೇವದಾಸ್ ಕಾಪಿಕಾಡ್, ಮುಖ್ಯ ಅತಿಥಿಗಳಾಗಿ ಶ್ರೀಮತಿ ಜೈಬುನಿಸ್ಸಾ, ಮಾನ್ಯ ನ್ಯಾಯಾಧೀಶರು, ಡಿ.ಎಲ್.ಎಸ್.ಎ, ಮಂಗಳೂರು, ವಿಶೇಷ ಅತಿಥಿಗಳಾಗಿ ಡಾ.ಶ್ರೀ ಅರ್ಜುನ್ ಶೆಟ್ಟಿ (ಪ್ರೋ & ಹೆಡ್, ನ್ಯೂರೋಸರ್ಜರಿ, ಕೆ.ಎಂ.ಸಿ) ಹಾಗೂ ಇತರ ಗಣ್ಯರು ಭಾಗವಹಿಸಿದ್ದು, ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಪಾಲನೆ ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿ ತಿಳುವಳಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಗರದ ಸಂಚಾರ ಸುವ್ಯವಸ್ಥೆಗೆ ಶ್ಲಾಘನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಂಚಾರಿ ವಿಷಯಗಳ ಬಗ್ಗೆ ರಸಪ್ರಶ್ನೆ ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತೀ ಹೆಚ್ಚು ಅಪಘಾತ ನಡೆಯುತ್ತಿರುವ ಒಟ್ಟು 16 ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳಾಗಿ ಗುರುತಿಸಿದ್ದು, ಈ ಸ್ಥಳಗಳಲ್ಲಿ ಒಟ್ಟು 315 ಅಪಘಾತಗಳು ನಡೆದಿದ್ದು, 77 ಜನರು ಸಾವನ್ನಪ್ಪಿರುತ್ತಾರೆ ಮತ್ತು ಸಾಕಷ್ಟು ಜನ ಗಾಯಗೊಂಡಿರುತ್ತಾರೆ. ಸ್ಥಳದಲ್ಲಿ ಅಪಘಾತವನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪೊಲೀಸ್ ಆಯುಕ್ತರು ಮಾತನಾಡಿ, ನಗರದಲ್ಲಿ ಯಾವುದೇ ವಾಹನ ಚಾಲಕ ಅಥವಾ ಸವಾರನು ಮಧ್ಯಪಾನ ಮಾಡಿ ವಾಹನವನ್ನು ಚಲಾಯಿಸಿ ಅಪಘಾತದಿಂದ ಸಾವು ಉಂಟು ಮಾಡಿದರೆ, ಅಂತಹ ಚಾಲಕ/ಸವಾರನ ವಿರುದ್ಧ ಅಪರಾಧಿಕ ಮಾನವ ಹತ್ಯೆ ಕಲಂ 105 ಬಿ.ಎನ್.ಎಸ್ ಪ್ರಕಾರ 10 ವರ್ಷದ ವರೆಗೆ ಸಜೆ ಯಂತೆ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು, ಕಾರಣ ಚಾಲಕರಿಗೆ ತಾನು ಪಾನಮತ್ತನಾಗಿ ಸಾರ್ವಜನಿಕರ ರಸ್ತೆಯಲ್ಲಿ ಚಲಿಸಿದರೆ ಜನರಿಗೆ ಅಪಾಯ ಎಂದು ತಿಳುವಳಿಕೆ ಇರುತ್ತದೆ.ಸಾಮಾನ್ಯವಾಗಿ ಒಂದು ಕುಟುಂಬವು ಒಬ್ಬ ವ್ಯಕ್ತಿಯ ದುಡಿಮೆಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿರುತ್ತದೆ. ಆ ಕುಟುಂಬದ ಆಧಾರಸ್ತಂಭವಾಗಿರುವ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ, ಆತನ ಮೇಲೆ ಅವಲಂಬಿತವಾಗಿರುವ ಇಡೀ ಕುಟುಂಬವು ಅಪಾರವಾದ ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕ ವ್ಯಥೆಯನ್ನು ಅನುಭವಿಸಿ ಸಂಪೂರ್ಣವಾಗಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಪಾದಚಾರಿಗಳ ಸುರಕ್ಷತೆಗಾಗಿ ಹೆದ್ದಾರಿಯಲ್ಲಿ ಹಾಗೂ ಕೆಲವು ಪ್ರಮುಖ ರಸ್ತೆಗಳಲ್ಲಿ ಸೆಂಟರ್ ಮಿಡಿಯನ್‌ಯನ್ನು ಆಳವಡಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿದೆ ಎಂದು ಅವರು ತಿಳಿಸಿದರು.

ಅದೇ ರೀತಿ ತುಳು ಚಲನಚಿತ್ರ ನಟ ಚಲನಚಿತ್ರ ನಟ ತೆಲಿಕೆದ ಬೊಳ್ಳಿ ಡಾ. ಶ್ರೀ ದೇವದಾಸ್ ಕಾಪಿಕಾಡ್ ರವರು ರಸ್ತೆಯನ್ನು ಉಪಯೋಗಿಸುವ ಚಾಲಕ/ಸವಾರರಿಗೆ ಹಾಗೂ ಪಾದಚಾರಿಗಳಿಗೆ ಎಚ್ಚರಿಕೆಯಿಂದ ರಸ್ತೆಯಲ್ಲಿ ಸಂಚರಿಸುವಂತೆ, ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಕರೆ ಕೊಟ್ಟಿರುತ್ತಾರೆ ಸಾರ್ವಜನಿಕ ರಸ್ತೆಯಲ್ಲಿ ಜಾಗೃತರಾಗಿರುವಂತೆ ಮನವಿ ಮಾಡಿರುತ್ತಾರೆ. ನಗರದಲ್ಲಿ ಹಾಗೂ ನಗರದ ಸುತ್ತಲಿನ ರಸ್ತೆಗಳಲ್ಲಿ 28 ಸ್ಥಳಗಳಲ್ಲಿ ಒಟ್ಟು 169 ಎಐ ಕ್ಯಾಮೆರಗಳನ್ನು ಅಳವಡಿಸಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಚಾಲಕ/ಸವಾರರ ಮೇಲೆ ಸೂಕ್ತ ನಿಗಾ ಇರಿಸಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

2025ರ ಮಂಗಳೂರು ನಗರ ಅಪಘಾತ ಅಂಕಿಅಂಶಗಳು:
ಮೃತ ದ್ವಿಚಕ್ರ ವಾಹನ ಸವಾರರು – 82
ಮೃತ ಪಾದಚಾರಿಗಳು – 67
ಒಟ್ಟು ಗಾಯಗೊಂಡವರು – 1,213
ಗಾಯಗೊಂಡ ದ್ವಿಚಕ್ರ ಸವಾರರು – 627
ಗಾಯಗೊಂಡ ಪಾದಚಾರಿಗಳು – 249

- Advertisement -

Related news

error: Content is protected !!