




ಮಂಗಳೂರು: ಲಯನ್ಸ್ ಜಿಲ್ಲೆ 317 ಡಿ ಯ ಹಾಸನ ಕೊಡಗು ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯೊಳಗೊಂಡ ಲಯನ್ಸ್ ಸದಸ್ಯರಿಗೆ ಲಿಯೋ ಸದಸ್ಯರಿಗೆ ಹಾಗೂ ಲೇಡಿ ಲಯನ್ಸ್ಗಳಿಗೆ ಕ್ರೀಡಾಕೂಟವು ಮಂಗಳೂರಿನಲ್ಲಿ ಮುಖ್ಯ ಸಂಯೋಜಕರಾದ ಗಣೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ರಾಜ್ಯಪಾಲರಾದ ಅರವಿಂದ ಶೆನೈ ರವರ ನಾಯಕತ್ವದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿಸೋಜಾ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತದನಂತರ ಲಯನ್ಸ್ ಸದಸ್ಯರ ಅದ್ದೂರಿಯ ಪಥಸಂಚಲ ನಡೆಯಿತು ಸಂಚಲನ ನಂತರ ರಾಜ್ಯಪಾಲರು ಬೇಲೂನ್ ಹಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ನಾಲ್ಕು ಜಿಲ್ಲೆಗಳ 400ಕ್ಕೂ ಮಿಕ್ಕಿ ಲಯನ್ಸ್ ಲಿಯೊ ಸದಸ್ಯರು ಭಾಗವಹಿಸಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಡಿಷನಲ್. ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಯವರು ಭಾಗ ವಿಜೇತರಿಗೆ ಬಹುಮಾನವನ್ನು ವಿತರಿಸಿ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಯಾಗಿ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ್ ಶೆಟ್ಟಿ ಅವರು ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರಥಮ ಉಪರಾಜ್ಯಪಾಲ ಹೆಚ್ ಎಂ ತಾರಾನಾಥ್ ದ್ವಿತೀಯ ಉಪರಾಜ್ಯ ಪಾಲ ಗೋವರ್ಧನ್ ಶೆಟ್ಟಿ ಮಾಜಿ ರಾಜ್ಯಪಾಲರು ಸಂಪುಟ ಕಾರ್ಯದರ್ಶಿ ಚಂದ್ರೇಗೌಡ ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯರ್ ವಿಟ್ಲ ರಾಜ್ಯಪಾಲರ ಸಂಯೋಜಕ ಜ್ಯೋತಿ ಎಸ್ ಶೆಟ್ಟಿ ಕ್ಯಾಬಿನೆಟ್ ಸಂಯೋಜಕೀ ನನ್ಸಿ ಮಸ್ಕೆ ರೇಂಜಸ್ ಲಿಯೋ ಅಧ್ಯಕ್ಷ ಶ್ರೀನಿಧಿ ಶೆಟ್ಟಿ ಜಿಲ್ಲಾಧ್ಯಕ್ಷರುಗಳು ಸಲಹೆಗಾರ ದಯಾನಂದ ರೈ ಮುಖ್ಯ ಸಲಹೆಗಾರ ಶ್ರೀಧರ್ ರಾಜ್ ಶೆಟ್ಟಿ ಲಯನ್ಸ್ ಪದಾಧಿಕಾರಿಗಳು ವಿವಿಧ ಕ್ಲಬ್ಬಿನ ಅಧ್ಯಕ್ಷರುಗಳು ಹಾಗೂ ಸದಸ್ಯರು ಭಾಗವಹಿಸಿದ್ದರು








