Wednesday, May 8, 2024
spot_imgspot_img
spot_imgspot_img

ಮಂಗಳೂರು: ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪೊ.ಪಿ.ಎಲ್ ಅಧಿಕಾರ ಸ್ವೀಕಾರ

- Advertisement -G L Acharya panikkar
- Advertisement -

ಮಂಗಳೂರು: ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪೊ.ಪಿ.ಎಲ್ ಧರ್ಮ ಅವರು ಮಾ.5ರಂದು ಅಧಿಕಾರ ವಹಿಸಿದ್ದಾರೆ.

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮಂಗಳೂರು ವಿವಿಗೆ ನೂತನ ಕುಲಪತಿಯಾಗಿ ಪ್ರೊ.ಪಿ.ಎಲ್ ಧರ್ಮ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಅಧಿಕಾರ ಸ್ವೀಕರಿಸಿದ್ದಾರೆ. ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.ಪಿ.ಎಲ್. ಧರ್ಮ ಅವರು ಮಂಗಳೂರು ವಿವಿಯ 10ನೇ ಕುಲಪತಿಯಾಗಿದ್ದಾರೆ. ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಕುಲಪತಿ ಹುದ್ದೆಗೇರುವ ಅವಕಾಶ ಗಿಟ್ಟಿಸಿಕೊಂಡವರಲ್ಲಿ ಎರಡನೇಯವರು ಪ್ರೊ.ಧರ್ಮ.

ಈ ಹಿಂದೆ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯರಿಗೆ ಮೊದಲ ಅವಕಾಶ ಸಿಕ್ಕಿತ್ತು. ಪ್ರಭಾರ ಕುಲಪತಿ ಪ್ರೊ.ಜಯರಾಜ ಅಮೀನ್ ಅವರಿಂದ ಅಧಿಕಾರ ಸ್ಪೀಕರಿಸಿದರು. ಪಿ.ಎಲ್.ಧರ್ಮ ಈ ಹಿಂದೆ ಮಂಗಳೂರು ವಿವಿಯ ಕುಲಸಚಿವ( ಮೌಲ್ಯಮಾಪನ)ರಾಗಿ , ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಹಿಂದಿನ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರ ಅಧಿಕಾರದ ಅವಧಿ ಜೂ.2 , 2023ರಲ್ಲಿ ಕೊನೆಗೊಂಡ ಬಳಿಕ ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಹಿರಿಯ ಡೀನ್ ಪ್ರೊ.ಜಯರಾಜ್ ಅಮೀನ್ ಪ್ರಭಾರ ಕುಲಪತಿಯಾಗಿಯಾಗಿದ್ದರು.

- Advertisement -

Related news

error: Content is protected !!