Tuesday, July 21, 2026
spot_imgspot_img
spot_imgspot_img

ಮಂಗಳೂರು: (ಸೆ.4) ಲಯನ್ಸ್ ಜಿಲ್ಲೆ 317D ವತಿಯಿಂದ “ಲಯನ್ಸ್ ಅನ್ನಪೂರ್ಣ” ರೇಶನ್ ಕಿಟ್‌ ವಿತರಣಾ ಕಾರ್ಯಕ್ರಮ

- Advertisement -
- Advertisement -

ಮಂಗಳೂರು: ಲಯನ್ಸ್ ಜಿಲ್ಲೆ 317D ಯ ವತಿಯಿಂದ LCIF ಇವರ ಸಹಕಾರ ಮತ್ತು ಅನುದಾನದೊಂದಿಗೆ ಹಾಸನ, ಚಿಕ್ಕಮಂಗಳೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ನೊಳಗೊಂಡ 120 ಕ್ಲಬ್‌ಗಳಿಗೆ ರೂ 25 ಲಕ್ಷ ವೆಚ್ಚದಲ್ಲಿ “ಲಯನ್ಸ್ ಅನ್ನಪೂರ್ಣ” ಯೋಜನೆಯ ಅನ್ವಯ ರೇಶನ್ ಕಿಟ್‌ ವಿತರಣಾ ಕಾರ್ಯಕ್ರಮವು ಸಪ್ಟೆಂಬರ್ 4ರಂದು ಬೆಳಿಗ್ಗೆ 10:30ಕ್ಕೆ ಲಯನ್ಸ್ ಸೇವಾ ಮಂದಿರ ಮಲ್ಲಿಕಟ್ಟೆ ಮಂಗಳೂರಿನಲ್ಲಿ ನಡೆಯಲಿದೆ.

ಲಯನ್ಸ್ ಜಿಲ್ಲೆ 317ಡಿ ಜಿಲ್ಲಾ ರಾಜ್ಯಪಾಲ ಲಯನ್‌ ಕುಡ್ಪಿ ಅರವಿಂದ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಮುಖ್ಯ ಅತಿಥಿಯಾಗು ಉಪಸ್ಥಿತರಿರುವರು. ಲಯನ್ಸ್ ಜಿಲ್ಲೆ 317ಡಿ ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಲಯನ್‌ ಭಾರತಿ ಬಿ.ಎಂ, ಲಯನ್ಸ್ ಜಿಲ್ಲೆ 317ಡಿ ಪ್ರಥಮ ಉಪ ಜಿಲ್ಲಾ ಗವರ್ನರ್‌ ಲಯನ್‌ ಎಚ್‌. ಎಂ ತಾರಾನಾಥ್‌, ಲಯನ್ಸ್ ಜಿಲ್ಲೆ 317ಡಿ ದ್ವಿತೀಯ ಉಪ ಜಿಲ್ಲಾ ಗವರ್ನರ್‌ ಲಯನ್‌ ಕೆ. ಗೋವರ್ಧನ ಶೆಟ್ಟಿ ಘನ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳು ಲಯನ್ಸ್ ನಾಯಕರು ಭಾಗವಹಿಸಬೇಕಾಗಿ ಜಿಲ್ಲಾ ಸಂಪರ್ಕ ಅಧಿಕಾರಿ ಲಯನ್ ಸುದರ್ಶನ್ ಪಡಿಯಾರ್ ವಿಟ್ಲರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!