Monday, July 20, 2026
spot_imgspot_img
spot_imgspot_img

ಮಂಗಳೂರು: (ಜ.9&10) “ಕರ್ನಾಟಕ ಕುಸ್ತಿ ಸಂಘ (ರಿ) ಹಾಗೂ ತಪಸ್ಯ ಫೌಂಡೆಶನ್” ವತಿಯಿಂದ ರಾಜ್ಯಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್’ಶಿಪ್

- Advertisement -
- Advertisement -

ಮಂಗಳೂರು: “ಕರ್ನಾಟಕ ಕುಸ್ತಿ ಸಂಘ (ರಿ) ಹಾಗೂ ತಪಸ್ಯ ಫೌಂಡೆಶನ್ ವತಿಯಿಂದ ರಾಜ್ಯಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್’ಶಿಪ್ ಆಯೋಜಿಸಲಾಗಿದೆ.ಈ ಮೂಲಕ ತಮ್ಮಲ್ಲಿ ತಿಳಿಯಪಡಿಸುವುದೇನೆಂದರೆ ಕ್ಯಾನ್ಸರ್‌ಪೀಡಿತ ಮಕ್ಕಳ ಕೊನೆಯ ದಿನಗಳ ಶುಕ್ರೂಷೆತೆ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ತಪಸ್ಯ ಫೌಂಡೇಷನ್, ಜಿಲ್ಲಾಡಳಿತ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಆಯೋಜಿಸಿರುವ ಮಂಗಳೂರು ಬೀಚ್ ಫೆಸ್ಟಿವಲ್‌ನಲ್ಲಿ ಕರ್ನಾಟಕ ಕುಸ್ತಿ ಸಂಘ(ರಿ) ಹಾಗೂ ತಪಸ್ಯಾ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ 3ನೇ ವರ್ಷದ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ ಅನ್ನು ದಿನಾಂಕ:09/01/2026 ರಿಂದ 10/01/2026ರವರೆಗೆ ಆಯೋಜನೆ ಮಾಡಲಾಗಿದೆ.

ದಿನಾಂಕ:09-01-2026ರ, ಶುಕ್ರವಾರ ಸಂಜೆ 4:00 ಗಂಟೆಗೆ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳು, ದಕ್ಷಿಣಭಾರತ ಕುಸ್ತಿ ಸಂಘದ ಉಪಾಧ್ಯಕ್ಷರು, ಅಖಿಲ ಭಾರತ ಬೀಚ್ ರೆಸ್ಲಿಂಗ್ ಕಮಿಟಿಯ ಅಧ್ಯಕ್ಷರು ಹಾಗೂ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ರವರು ಹಾಗೂ ತಪಸ್ಯ ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿಗಳಾದ ಸಭಿತಾ ಆರ್ ಶೆಟ್ಟಿ ರವರು, ಕರ್ನಾಟಕ ಬೀಚ್ ರೆಸ್ಲಿಂಗ್ ಕಮಿಟಿಯ ವೈಸ್ ಛೇರ್ಮನ್ ನಿತ್ಯಾನಂತ ಶೆಟ್ಟಿರವರು ಆಂಜನೇಯ ಸ್ವಾಮಿ ಹಾಗೂ ಚಾಮುಂಡೇಶ್ವರಿ ದೇವಿ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಜ್ಯೋತಿ ಬೆಳಗಿಸುವುದರ ಮೂಲಕ ಈ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿಲಿದ್ದು, ಈ ಉದ್ಘಾಟನಾ ಕಾರ್ಯಕ್ರಮಲ್ಲಿ ಕರ್ನಾಟಕ ಕುಸ್ತಿ ಸಂಘದ ಖಜಾಂಚಿಗಳಾದ ಶ್ರೀನಿವಾಸ್ ಅಂಗರಕೋಡಿ, ಕರ್ನಾಟಕ ಕುಸ್ತಿ ಸಂಘದ ತಾಂತ್ರಿಕ ವಿಭಾಗದ ಛೇರ್ಮನ್ ಡಾ.ವಿನೋದ್ ಕುಮಾರ್.ಕೆ, ಕರ್ನಾಟಕ ಕುಸ್ತಿ ಸಂಘದ ಮೀಡಿಯಾ ಅಕ್ರಿಡಿಯೇಷನ್ ಕಮಟಿಯ ಸದಸ್ಯರಾದ ರಾಮದಾಸ್ ಶೆಟ್ಟಿ, ಕರ್ನಾಟಕ ಕುಸ್ತಿ ಸಂಘದ ಕೇಂದ್ರ ಕಛೇರಿಯ ಸಿಇಓ ನಾಗೇಶ್.ಎಸ್ ಸೇರಿದಂತೆ ಅನೇಕ ಗಣ್ಯವ್ಯಕ್ತಿಗಳು, ವಿವಿಧ ಪಕ್ಷ ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ.

ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನ ಸೂಚನೆಗಳು:

  • ಈ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಂಡರ್-15 ವಯೋಮಿತಿಯ ಹಾಗೂ ಅಂಡ‌ರ್ 17 ವಯೋಮಿತಿಯ ಹಾಗೂ ಹಿರಿಯರ ವಿಭಾಗ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿಗಳನ್ನು ನಡೆಸಲಾಗುವುದು.
  • ಈ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ ನಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಕುಸ್ತಿಪಟುಗಳೊಂದಿಗೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದಂತಹ ಪುರುಷ ಹಾಗೂ ಮಹಿಳಾ ಕುಸ್ತಿಪಟುಗಳು ಭಾಗವಹಿಸಿಲಿದ್ದಾರೆ.
  • ಈ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನಗಳಿಸಿದಂತಹ ಕುಸ್ತಿಪಟುಗಳು ನೇರವಾಗಿ ರಾಷ್ಟ್ರೀಯ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗುತ್ತಾರೆ.
  • ದಿನಾಂಕ:09-01-2026ರ, ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಎಲ್ಲಾ ವಿಭಾಗದ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳ ದೇಹತೂಕಗಳನ್ನು ತಗೆದುಕೊಳ್ಳಲಾಗುವುದು
  • ದಿನಾಂಕ:10-01-2026ರ ಮಧ್ಯಾಹ್ನ 3:30 ಗಂಟೆಯಿಂದ ಎಲ್ಲಾ ವಿಭಾಗದ ಫೈನಲ್ ಪಂದ್ಯಾವಳಿಗಳು ಹಾಗೂ ಮೂರನೇ ಸ್ಥಾನಕ್ಕೆ ನಡೆಯುವ ಕುಸ್ತಿ ಪಂದ್ಯಾವಳಿಗಳನ್ನು ನಡೆಸಲಾಗುವುದು
  • ಅಂಡರ್-15 ವರ್ಷ ವಯೋಮಿತಿಯ ದೇಹತೂಕದ ವಿಭಾಗಗಳು: ಬಾಲಕರ ವಿಭಾಗದಲ್ಲಿ: 45ಕೆಜಿ, 50ಕೆಜಿ, 55ಕೆಜಿ, 60ಕೆಜಿ, 65ಕೆಜಿ, 75ಕೆಜಿ ಮತ್ತು ಬಾಲಕಿಯರ ವಿಭಾಗದಲ್ಲಿ: 40ಕೆಜಿ, 45ಕೆಜಿ, 50ಕೆಜಿ, 55ಕೆಜಿ, 60ಕೆಜಿ, 65ಕೆಜಿ ವಿಭಾಗಗಳು ಇರುತ್ತದೆ.
  • ಅಂಡರ್-17 ವರ್ಷ ವಯೋಮಿತಿಯ ದೇಹತೂಕದ ವಿಭಾಗಗಳು: ಬಾಲಕರ ವಿಭಾಗದಲ್ಲಿ: 50ಕೆಜಿ, 60ಕೆಜಿ, 70ಕೆಜಿ, 80ಕೆಜಿ ಮತ್ತು ಬಾಲಕಿಯರ ವಿಭಾಗದಲ್ಲಿ: 40ಕೆಜಿ, 50ಕೆಜಿ, 60ಕೆಜಿ, 70ಕೆಜಿ ವಿಭಾಗಗಳು ಇರುತ್ತದೆ.
  • ಹಿರಿಯರ ದೇಹತೂಕದ ವಿಭಾಗಗಳು: ಪುರುಷರ ವಿಭಾಗದಲ್ಲಿ 70ಕೆಜಿ, 80ಕೆಜಿ, 90ಕೆಜಿ, +90ಕೆಜಿ ಮತ್ತು ಮಹಿಳಾ ವಿಭಾಗದಲ್ಲಿ 50ಕೆಜಿ, 60ಕೆಜಿ, 70ಕೆಜಿ, +70ಕೆಜಿ ವಿಭಾಗಗಳು ಇರುತ್ತದೆ.
  • ಈ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದಂತಹ ವಿಜೇತ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಸಂಘ(ರಿ) ಹಾಗೂ ಭಾರತೀಯ ಕುಸ್ತಿ ಸಂಘದ ಅನುಮೋದಿತ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು
  • ಈ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಮಗ್ರ ಪ್ರಶಸ್ತಿಗಳಿಸಿದ ಜಿಲ್ಲೆಗೆ ಟ್ರೋಫಿಯನ್ನು ನೀಡಲಾಗುವುದು.

ಈ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಷಿಪ್ ಯಶಸ್ವಿಯಾಗಿ ನಡೆಯಲು ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಪತ್ರಿಕಾರಂಗದ ದಿನಪತ್ರಿಕೆ ಮತ್ತು ವಿದ್ಯನ್ಮಾನ ಮಾಧ್ಯಮದ ಸದಸ್ಯರಾದ ತಮ್ಮಗಳ ಪ್ರೋತ್ಸಾಹ ಮತ್ತು ಸಹಕಾರ ಅತ್ಯಾವಶ್ಯಕವಾಗಿದ್ದು ದಯಮಾಡಿ ಈ ಮೇಲಿನ ವಿಷಯಗಳನ್ನು ತಮ್ಮ ದಿನಪತ್ರಿಕೆ ಹಾಗೂ ವಿದ್ಯನ್ಮಾನ ಮಾಧ್ಯಮದಲ್ಲಿ ಮುಂಚಿತವಾಗಿ ಪ್ರಕಟಿಸಿ ಪ್ರಚಾರ ಮಾಡುವ ಮೂಲಕ ಸಹಕರಿಸಬೇಕೆಂದು ಕರ್ನಾಟಕ ಕುಸ್ತಿ ಸಂಘ(ರಿ) ವತಿಯಿಂದ ತಮ್ಮಲ್ಲಿ ವಿನಮ್ರತೆಯ ಮನವಿ

- Advertisement -

Related news

error: Content is protected !!