Monday, April 29, 2024
spot_imgspot_img
spot_imgspot_img

ಮಂಗಳೂರು: ಉದ್ಯೋಗದ ಆಮಿಷವೊಡ್ಡಿ 10.88 ಲಕ್ಷ ರೂ. ವಂಚನೆ

- Advertisement -G L Acharya panikkar
- Advertisement -
This image has an empty alt attribute; its file name is Sudharma-Gayan-Arcade-TV-575x1024.jpg

ಮಂಗಳೂರು: ಪಾರ್ಟ್‌ಟೈಂ ಉದ್ಯೋಗದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ 10.88 ಲಕ್ಷ ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಅಕ್ಯುಯೇಟ್‌ ಮೀಡಿಯಾ ಕಂಪೆನಿಯ ಪ್ರತಿನಿಧಿಯೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ ದೂರುದಾರರಿಗೆ, ಆನ್‌ಲೈನ್‌ನಲ್ಲಿ ಟಾಸ್ಕ್ ಗಳ ಮೂಲಕ ಪ್ರತಿದಿನ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ವಾಟ್ಸಾಪ್ ಸಂದೇಶದಲ್ಲಿ ತಿಳಿಸಿದ್ದ. ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ

ಆರಂಭದಲ್ಲಿ 1,000 ರೂ.ಗಳಿಂದ 3,000 ರೂ.ಗಳನ್ನು ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಹಣ ಜಮೆಯಾಗಿತ್ತು. ಆದರೆ ಅನಂತರವೂ ಹಣ ಹೂಡಿಕೆಗೆ ಅಪರಿಚಿತ ಒತ್ತಾಯಿಸಿದ್ದ. ಅದರಂತೆ ದೂರುದಾರರಿಂದ ಹಂತಹಂತವಾಗಿ ಒಟ್ಟು 10.88 ಲಕ್ಷ ರೂ. ವರ್ಗಾಯಿಸಿಕೊಂಡು ಯಾವುದೇ ಮೊತ್ತ ಮರುಪಾವತಿಸದೆ ವಂಚಿಸಿದ್ದಾನೆ. ಘಟನೆ ಬಗ್ಗೆ ಮಂಗಳೂರಿನ ಸೆನ್‌ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!