Thursday, June 4, 2026
spot_imgspot_img
spot_imgspot_img

ಮಂಗಳೂರು: ಡ್ರಗ್ಸ್ ಸೇವನೆ ಆರೋಪ; ಇಬ್ಬರು ಆರೋಪಿಗಳ ಬಂಧನ..!

- Advertisement -
- Advertisement -

ಮಂಗಳೂರು: ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾವೂರು ಹಾಗೂ ಬಂದರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಂಧಿಸಿದ್ಧಾರೆ. ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಗಳನ್ನು ಮನೀಶ್ (28) ಹಾಗೂ ಟಿ.ಟಿ. ರೋಡ್ ನಿವಾಸಿ ಸವಿನ್‌ರಾಜ್ (18) ಎಂದು ಗುರುತಿಸಲಾಗಿದೆ

ಬೊಂದೇಲ್ ಕೃಷ್ಣನಗರ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಸ್ಥಳೀಯ ನಿವಾಸಿ ಮನೀಶ್ ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂದರ್‌ನ ಉತ್ತರದಕ್ಕೆ ಕಡೆಗೆ ತೆರಳುವ ರಸ್ತೆಯಲ್ಲಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಆರೋಪದ ಮೇರೆಗೆ ನಗರದ ಟಿ.ಟಿ. ರೋಡ್ ನಿವಾಸಿ ಸವಿನ್‌ರಾಜ್ ಎಂಬಾತನನ್ನು ಬಂದರು ಠಾಣೆಯ ಪೊಲಿಸರು ಬಂಧಿಸಿದ್ದಾರೆ.

- Advertisement -

Related news

error: Content is protected !!