- Advertisement -
- Advertisement -


ಮಂಗಳೂರು: ಗಾಂಜಾ ಸೇವನೆ ಮಾಡಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಸಿದ ಘಟನೆ ಮಂಗಳುರಿನಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಬಿಕರ್ನಕಟ್ಟೆ ಕಕ್ಕೆಬೆಟ್ಟು ನಿವಾಸಿ ಜ್ಞಾನೇಶ್ ರೈ (20) ಮತ್ತು ಬಿಕರ್ನಕಟ್ಟೆ ದತ್ತನಗರದ ಕೌಶಿಕ್ (21) ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಶಿವಬಾಗ್ ಮತ್ತು ಬಿಕರ್ನಕಟ್ಟೆ ಬಳಿಯಿಂದ ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಸೇವಿಸಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇಬ್ಬರ ವಿರುದ್ಧವೂ ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- Advertisement -