Tuesday, July 21, 2026
spot_imgspot_img
spot_imgspot_img

ಮಂಗಳೂರು: ನಾಡದೋಣಿ ಮಗುಚಿ ಬಿದ್ದು ಇಬ್ಬರು ನೀರುಪಾಲು..!

- Advertisement -
- Advertisement -

ಮಂಗಳೂರು: ನಾಡ ದೋಣಿ ಮಗುಚಿ ಬಿದ್ದು ಇಬ್ಬರು ನೀರುಪಾಲಾದ ಘಟನೆ ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ನಡೆದಿದೆ.

ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೀನು ಹಿಡಿಯುತ್ತಿದ್ದಾಗ ಜೋರಾಗಿ ಮಳೆ ಗಾಳಿ ಬಂದ ರಭಸಕ್ಕೆ ದೋಣಿ ಮಗುಚಿದೆ. ಪರಿಣಾಮ ದೋಣಿಯಲ್ಲಿದ್ದವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ದೋಣಿಯಲ್ಲಿದ್ದ ಯಶವಂತ, ಕಮಲಾಕ್ಷ ಎಂಬವರು ನಾಪತ್ತೆಯಾಗಿರುತ್ತಾರೆ.

ನಾಡ ದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೇ ಸಮೀಪ ದಡಕ್ಕೆ ಬಂದು ಬಿದ್ದಿದೆ. ಆದರೆ ನಾಡ ದೋಣಿ ಇನ್ನೂ ಪತ್ತೆಯಾಗಿಲ್ಲ. ಇದೀಗ ಗ್ರಾಮಸ್ಥರು ನಾಡದೋಣಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

- Advertisement -

Related news

error: Content is protected !!