Monday, July 27, 2026
spot_imgspot_img
spot_imgspot_img

ಮಂಗಳೂರು: ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗುವನ್ನು ರಕ್ಷಿಸಿದ ಯುವಕರು

- Advertisement -
- Advertisement -

ಮಂಗಳೂರು: ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗುವನ್ನು ಯುವಕರು ರಕ್ಷಿಸಿದ ಘಟನೆ ಕೊಣಾಜೆಯಬೆಳ್ಳ ಸಮೀಪದ ಮಾರಿಯಮ್ಮಗೋಳಿ ಎಂಬಲ್ಲಿ ನಡೆದಿದೆ.

ಒಂದು ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಾ ಹೋಗಿ ಮನೆಯ ಹಿಂಭಾಗದಲ್ಲಿ ಇರುವ ಬಾವಿಗೆ ಬಿದ್ದಿದೆ. ಕೂಡಲೇ ಮನೆ ಮಂದಿ ಬೊಬ್ಬೆ ಹಾಕಿದಾಗ ಮಗುವಿನ ಚಿಕ್ಕಪ್ಪ ಜೀವನ್ ಬಾವಿಗೆ ಹಾರಿದ್ದಾರೆ. ಬಳಿಕ ಸ್ಥಳೀಯ ಯುವಕ ವಿವೇಕ್ ಪೂಜಾರಿ ಬಾವಿಗಿಳಿದು ಮಗುವನ್ನು ರಕ್ಷಿಸಿದ್ದಾರೆ ಅದೃಷ್ಟವಶಾತ್ ಯಾವುದೇ ಅಪಾಯವಾಗದೇ ಮಗು ತಾಯಿಯ ಮಡಿಲು ಸೇರಿದೆ.

ಬಳಿಕ ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ಪರೀಕ್ಷೆ ನಡೆಸಿ ಮಗು ಆರೋಗ್ಯವಾಗಿದೆ ಎಂದು ಖಚಿತಪಡಿಸಿದ್ದಾರೆ. ಯುವಕರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Related news

error: Content is protected !!