Saturday, April 27, 2024
spot_imgspot_img
spot_imgspot_img

ಆಸ್ಪತ್ರೆ ಎದುರಿನಲ್ಲಿ ತಲವಾರು ದಾಳಿ!!

- Advertisement -G L Acharya panikkar
- Advertisement -

ಮಂಗಳೂರು: ಇತ್ತೀಚೆಗೆ ಕೈಕಂಬದ ಕಂದಾವರದಲ್ಲಿ ವೆನ್ಜ್ ಅಬ್ದುಲ್ಲಾ ಅವರ ಮೇಲೆ ತಲವಾರು ದಾಳಿ ನಡೆಸಿದ ತಂಡ ಮತ್ತೆ ತನ್ನ ದುಷ್ಕೃತ್ಯವನ್ನು ಮುಂದುವರೆಸಿದೆ.

ಮಂಗಳೂರಿನ ಯುನಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಇದೇ ತಂಡ ತಲವಾರು ಬೀಸಿದ್ದು ನೌಶದ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ.

ಇತ್ತೀಚೆಗೆ ಕಂದಾವರದಲ್ಲಿ ವೆನ್ಜ್ ಅಬ್ದುಲ್ಲಾ ಅವರ ಮೇಲೆ ದಾಳಿ ನಡೆಸಿದ ತಂಡ ಯುನಿಟಿ ಆಸ್ಪತ್ರೆ ಬಳಿ ಬಂದು ವೆನ್ಜ್ ಅಬ್ದುಲ್ಲಾ ಅವರ ಜೊತೆ ಆಸ್ಪತ್ರೆಯಲ್ಲಿದ್ದ ಇಬ್ಬರನ್ನು ಮಾತುಕತೆಗೆಂದು ಹೊರಗೆ ಕರೆಸಿಕೊಂಡಿದೆ. ಈ ವೇಳೆ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ ಎಂದು ತಿಳಿದುಬಂದಿದೆ. ನೌಶದ್ ಅವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಯುವಕನನ್ನು ನೌಶಾದ್ (30) ಎಂದು ಗುರುತಿಸಲಾಗಿದೆ. ‌

ನೌಶಾದ್, ವಾರದ ಹಿಂದೆ ಕೈಕಂಬ ಬಳಿಯ ಕಂದಾವರ ಮಸೀದಿ ಬಳಿ ಚೂರಿ ಇರಿತಕ್ಕೆ ಒಳಗಾಗಿದ್ದ ವೆನ್ಝ್ ಅಬ್ದುಲ್ಲ ಅಜೀಜ್ ಅವರ ಅಳಿಯ ಎನ್ನಲಾಗುತ್ತಿದೆ. ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಅಜೀಜ್ ಯುನಿಟಿ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಅವರ ಮಗ ಮತ್ತು ಅಳಿಯ ನೋಡಿಕೊಳ್ಳುತ್ತಿದ್ದರು.

ಈ ವಿಚಾರ ತಿಳಿದ ತಂಡ, ಕಾರಿನಲ್ಲಿ ಯುನಿಟಿ ಆಸ್ಪತ್ರೆಯ ಬಳಿ ಬಂದಿದ್ದು ಮಗನಿಗೆ ಹಲ್ಲೆ ನಡೆಸುವ ನಿಟ್ಟಿನಲ್ಲಿ ಹೊಂಚು ಹಾಕಿತ್ತು. ಒಂದೇ ರೀತಿಯ ಡ್ರೆಸ್ ಹಾಕಿದ್ದ ಅಳಿಯ ನೌಶಾದ್ ಆಸ್ಪತ್ರೆಯಿಂದ ಹೊರಬಂದಿದ್ದ ವೇಳೆ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಇಬ್ಬರು ತಲವಾರು ಬೀಸಿದ್ದು, ಹೊಟ್ಟೆ ಹಾಗೂ ಎದೆಗೆ ಗಂಭೀರ ಗಾಯವಾಗಿದೆ. ನೌಶಾದ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಬ್ದುಲ್ ಅಜೀಜ್ ಮೇಲೆ ಹಲ್ಲೆಗೈದಿದ್ದ ತಂಡವೇ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ.

ಪಾಂಡೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!