Wednesday, April 24, 2024
spot_imgspot_img
spot_imgspot_img

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದರೋಡೆ ಪ್ರಕರಣ!- 24 ಗಂಟೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಉಳ್ಳಾಲ ಪೋಲೀಸರು

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ಮತ್ತು ಉಳ್ಳಾಲ ಭಾಗದಲ್ಲಿ ರಿಕ್ಷಾದಲ್ಲಿ ಬಂದು ಇಬ್ಬರನ್ನು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ರಿಕ್ಷಾ ಚಾಲಕ ಸೇರಿದಂತೆ ಇಬ್ಬರನ್ನು ಘಟನೆ ನಡೆದ ಒಂದು ದಿನದೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌. ಕೋಡಿ ಮತ್ತು ಮಾಸ್ತಿಕಟ್ಟೆ ನಿವಾಸಿಗಳಾದ ಮಹಮ್ಮದ್ ತೌಸೀಫ್ ಮತ್ತು ಸೈಫುದ್ದೀನ್ ಎಂಬವರು ಬಂಧಿತ ಆರೋಪಿಗಳು.

ಡಿ.25 ರಂದು ಮಂಗಳೂರಿನ ಬಂದರು ಠಾಣಾ ವ್ಯಾಪ್ತಿಯ ಬೀಬಿ ಅಲಾಬಿ ರಸ್ತೆಯಲ್ಲಿ ಪ್ರಭುದೇವ ಎಂಬವರು ಮನೆಯಿಂದ ಹೊರಬಂದು ಮೊಬೈಲಿನಲ್ಲಿ ಮಾತನಾಡುತ್ತಿದ್ದ ಸಂದರ್ಭ ರಿಕ್ಷಾದಲ್ಲಿ ಬಂದ ಇಬ್ಬರು ದೊಣ್ಣೆಯಿಂದ ತಲೆಗೆ ಬಡಿದು ಮೊಬೈಲನ್ನು ಕಿತ್ತು ಪರಾರಿಯಾಗಿದ್ದರು.

ಆರೋಪಿಗಳು ಅದೇ ದಿನ ರಾತ್ರಿ ತೊಕ್ಕೊಟ್ಟಿನಿಂದ ಬಾಡಿಗೆ ನೆಪದಲ್ಲಿ ಜಾಫರ್ ಎಂಬವರನ್ನು ಕರೆದೊಯ್ದು ಉಳ್ಳಾಲದ ಭಗವತಿ ದೇವಸ್ಥಾನದ ರಸ್ತೆ ಬಳಿ ಇಳಿಸಿ ದೊಣ್ಣೆಯಿಂದ ಹೊಡೆದು ಆತನಲ್ಲಿರುವ ಚಿನ್ನ, ಮೊಬೈಲ್ ಹಾಗೂ ನಗದು ಕಳವು ನಡೆಸಿದ್ದಾರೆ. ಈ ಕುರಿತು ಉಳ್ಳಾಲ ಮತ್ತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಳ್ಳಾಲ ಪೊಲೀಸರು ಒಂದು ದಿನದೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಠಾಣಾಧಿಕಾರಿ ಸಂದೀಪ್ ಕುಮಾರ್ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್.ಐ ಶಿವಕುಮಾರ್ ಮತ್ತು ತಂಡ ಭಾಗಿಯಾಗಿತ್ತು.

- Advertisement -

Related news

error: Content is protected !!