Monday, April 29, 2024
spot_imgspot_img
spot_imgspot_img

ಮಾಣಿ: (ಜ.20-25) ಶ್ರೀ ಉಳ್ಳಾಲ್ತಿ ದೈವಸ್ಥಾನ ಹಾಗೂ ಮಾಣಿಗುತ್ತು ಭಂಡಾರಮನೆ ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶ ಹಾಗೂ ಕಾಲಾವಧಿ ಮೆಚ್ಚಿ ಜಾತ್ರೆ

- Advertisement -G L Acharya panikkar
- Advertisement -

ಮಾಣಿ: ಶ್ರೀ ಉಳ್ಳಾಲ್ತಿ ದೈವಸ್ಥಾನ ಹಾಗೂ ಮಾಣಿಗುತ್ತು ಭಂಡಾರಮನೆ ಶ್ರೀ ಉಳ್ಳಾಲ್ತಿ, ಬೆಮ್ಮೆರ್‍, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿ ಪುನರ್‍ ಪ್ರತಿಷ್ಠೆ ಬ್ರಹ್ಮಕಲಶ ಜ.20 ರಿಂದ 25ರ ವರೆಗೆ ಹಾಗೂ ಕಾಲಾವಧಿ ಮೆಚ್ಚಿ ಜಾತ್ರೆ ಫೆ. 5 ಮತ್ತು 6 ರಂದು ನಡೆಯಲಿದೆ.

ದಿನಾಂಕ 20-01-2024ನೇ ಶನಿವಾರದಿಂದ ದಿನಾಂಕ 25-01-2024ನೇ ಗುರುವಾರದ ವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವ ಮತ್ತು ಕೂಡುಕಟ್ಟಿನ ಯಜಮಾನತ್ವದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಬ್ರಹ್ಮಕಲಶ ಮತ್ತು ಮಾಣಿಗುತ್ತು ಭಂಡಾರದಮನೆ ಶ್ರೀ ಉಳ್ಳಾಲ್ತಿ, ಬೆಮ್ಮೆರ್‍, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ನೂತನ ಧರ್ಮಚಾವಡಿಯಲ್ಲಿ ಪುನರ್‍ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ನಡೆಯಲಿದೆ.

ದಿನಾಂಕ 20-01-2024ನೇ ಶನಿವಾರ ಬೆಳಿಗ್ಗೆ ಗಂಟೆ 10 ರಿಂದ ಶ್ರೀ ಭ್ರಾಮರಿ ಭಜನಾ ಮಂಡಳಿ, ಮಾಣಿ ಇವರಿಂದ ಭಜನೆ, ಬಳಿಕ ಉಗ್ರಾಣ ಮುಹೂರ್ತ, ಮಧ್ಯಾಹ್ನ ಅನ್ನಸಂತರ್ಪಣೆ, ನಂತರ ಅರೆಬೆಟ್ಟು-ಕಲ್ಲಡ್ಕ-ಸೂರಿಕುಮೇರು-ಮಾಣಿ-ಕೊಡಾಜೆ ಮಾರ್ಗವಾಗಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಸಂಜೆ ಶ್ರೀ ಕಪಿಲೇಶ್ವರ ಕಲಾ ಸಮಿತಿ, ಚಾರ್ವಾಕ ಪುತ್ತೂರು ಇವರಿಂದ ಚೆಂಡೆವಾದನ, ಸಂಜೆ 6ಕ್ಕೆ ತಂತ್ರಿಗಳ ಆಗಮನ, ಸ್ವಾಗತ, ರಾತ್ರಿ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಪ್ರಾರ್ಥನೆ, ಪ್ರಸಾದ ಪರಿಗ್ರಹ, ಬಿಂಬ-ಮಂಚ ಪರಿಗ್ರಹ, ಪುಣ್ಯಾಹ, ಬಿಂಬ ಜಲಾಧಿವಾಸ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ, ಮಾಣಿಗುತ್ತು ಧರ್ಮಚಾವಡಿಯಲ್ಲಿ ಅಂಕುರಾರ್ಪಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 6 ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಪೌರಾಣಿಕ ಯಕ್ಷಗಾನ ಬಯಲಾಟ ’ಇಂದ್ರಪ್ರಸ್ಥ’ ನಡೆಯಲಿದೆ.

ದಿನಾಂಕ 21-01-2024ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 7 ರಿಂದ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಶ್ರೀ ಗಣಪತಿ ಹೋಮ, ಬಿಂಬಶುದ್ಧಿ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮಗಳು, ಹೋಮ ಕಲಶಾಭಿಷೇಕ
ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ಗಣಪತಿ ಹೋಮ, ಅಂಕುರ ಪೂಜೆ, ಬೆಳಿಗ್ಗೆ ಗಂಟೆ 9.30 ರಿಂದ ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಕಾರ್ಲ ಪೆರ್ನೆ ಇವರಿಂದ ಭಜನೆ ನಡೆಯಲಿದೆ. ಬಳಿಕ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಇವರಿಂದ ’ನೃತ್ಯಾಂಜಲಿ’ ನಡೆಯಲಿದೆ. ಮಧ್ಯಾಹ್ನ ಗಂಟೆ 12 ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 1.30 ರಿಂದ ತುಳು ಯಕ್ಷಗಾನ ತಾಳಮದ್ದಲೆ, ’ತುಳುನಾಡ ಬಲಿಯೇಂದ್ರ’ ನಡೆಯಲಿದೆ. ರಾತ್ರಿ ಗಂಟೆ 7 ರಿಂದ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಮತ್ತು ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ದುರ್ಗಾನಮಸ್ಕಾರ ಪೂಜೆ ನಡೆದು ಅನಂತರ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ-ಸಂಜೆ 6ರಿಂದ ’ಕೋಟಿ-ಚೆನ್ನಯ’ ಧಾರಾವಾಹಿಯ ದೇಯಿಬೈದೆದಿ ಖ್ಯಾತಿಯ ಶೀತಲ್ ಶೆಟ್ಟಿ ಸಾರಥ್ಯದ ನಕ್ಷತ್ರ ನೃತ್ಯ ಕಲಾ ತಂಡ, ಆಲಂಗಾರು ಇವರು ಪ್ರಸ್ತುತ ಪಡಿಸುವ “ನಾಟ್ಯ ವೈಭವ” ನಡೆಯಲಿದೆ.

ದಿನಾಂಕ 22-01-2024ನೇ ಸೋಮವಾರ ಬೆಳಿಗ್ಗೆ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಶ್ರೀ ಗಣಪತಿ ಹೋಮ, ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ಗಣಪತಿ ಹೋಮ, ಅಂಕುರಪೂಜೆ ಬಳಿಕ ಚಂಡಿಕಾಹೋಮ ಪ್ರಾರಂಭಗೊಳ್ಳಲಿದೆ. ನಂತರ ಶ್ರೀ ಕಪಿಲೇಶ್ವರ ಮಹಿಳಾ ಭಜನಾ ಮಂಡಳಿ ಚಾರ್ವಾಕ ಕಾಣಿಯೂರು ಇವರಿಂದ ಭಜನೆ ನಡೆದು ಶ್ರೀ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ “ಗೀತಾ-ಸಾಹಿತ್ಯ-ಸಂಭ್ರಮ” ಮಧ್ಯಾಹ್ನ ಗ್ರಹಶಾಂತಿ ಸಹಿತ ಚಂಡಿಕಾಹೋಮ ಪೂರ್ಣಾಹುತಿ, ಮಧ್ಯಾಹ್ನ ಗಂಟೆ 12.30 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ 2 ರಿಂದ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಮಾಣಿ ಇವರಿಂದ ಭಜನೆ ನಡೆಯಲಿದೆ. ರಾತ್ರಿ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಬ್ರಹ್ಮಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ಕುಂಭೇಶ ಕರ್ಕರಿ ಕಲಶ ಪೂಜೆ ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ-ಸಂಜೆ ಗಂಟೆ 6 ರಿಂದ ಬಲೆ… ಚಾ ಪರ್‍ಕ… ಕಲಾವಿದರಿಂದ, ಲಯನ್ ಡಾ| ದೇವದಾಸ್ ಕಾಪಿಕಾಡ್ ರಚಿಸಿ, ನಿರ್ದೇಶಿಸಿ, ನಟಿಸಿರುವ ತುಳು ಹಾಸ್ಯಮಯ ನಾಟಕ “ನಾಯಿದ ಬೀಲ” ನಡೆಯಲಿದೆ.

ದಿನಾಂಕ 23-01-2024ನೇ ಮಂಗಳವಾರ ಬೆಳಿಗ್ಗೆ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಶ್ರೀ ಗಣಪತಿ ಹೋಮ, ತತ್ವಹೋಮ, ತತ್ವಕಲಶ ಪೂಜೆ, ತತ್ವ ಕಲಶಾಭಿಷೇಕ, ಪರಿಕಲಶಾಭಿಷೇಕ
ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ಗಣಪತಿ ಹೋಮ, ಅಂಕುರ ಪೂಜೆ ನಡೆಯಲಿದೆ. ಬಳಿಕ ಶ್ರೀ ಎಲ್.ಕೆ.ಧರಣ್ ಮಾಣಿ ಮತ್ತು ಬಳಗದವರಿಂದ ಭಜನೆ ನಡೆಯಲಿದೆ. ಬೆಳಿಗ್ಗೆ 10.30ರಿಂದ ಕಲಾರತ್ನ ಶಂನಾಡಿಗ ಕುಂಬ್ಳೆ ಇವರಿಂದ ಹರಿಕಥಾ ಸತ್ಸಂಗ ಮಧ್ಯಾಹ್ನ ಶ್ರೀ ಉಳ್ಳಾಲ್ತಿ ಮಾಡದಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗುರುಕುಲ ಕಲಾ ಕೇಂದ್ರ ಮೆಲ್ಕಾರ್‍, ಶ್ರೀ ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿ ಕಲ್ಲೆಟ್ಟಿ ಇವರಿಂದ ಭಜನೆ ನಡೆಯಲಿದೆ. ರಾತ್ರಿ ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ದುರ್ಗಾನಮಸ್ಕಾರ ಪೂಜೆ, ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ-ಸಂಜೆ ಗಂಟೆ 6 ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ದಕ್ಷ ಸಾರಥ್ಯದಲ್ಲಿ ಪೌರಾಣಿಕ ಯಕ್ಷಗಾನ ಬಯಲಾಟ “ಧರ್ಮ ಸಿಂಹಾಸನ” ನಡೆಯಲಿದೆ.

ದಿನಾಂಕ 24-01-2024ನೇ ಬುಧವಾರ ಬೆಳಿಗ್ಗೆ ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ಗಣಪತಿ ಹೋಮ, ಬಿಂಬಶುದ್ಧಿ, ಪ್ರೋಕ್ತ ಹೋಮ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯಾಗಮನ, ಶಯನ ಬೆಳಿಗ್ಗೆ 9.30ರಿಂದ ತೆಂಕು-ಬಡಗು ಯಕ್ಷಗಾನ ನೃತ್ಯ ವೈಭವ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ 2 ರಿಂದ ಸ್ವರಾರ್ಪಣಮ್ ಕಟೀಲು ಇವರಿಂದ ಭಜನೆ ನಡೆಯಲಿದೆ. ರಾತ್ರಿ ಕುಂಭೇಶ ಕರ್ಕರಿ ಕಲಶ ಪೂಜೆ, ಅಧಿವಾಸ ಹೋಮ, ಧ್ಯಾನಾಧಿವಾಸ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ- ಸಂಜೆ ಗಂಟೆ 6ರಿಂದ ಶ್ರೀ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ನಡೆಯಲಿದೆ.

ದಿನಾಂಕ 25-01-2024ನೇ ಗುರುವಾರ ಬೆಳಿಗ್ಗೆ ಗಂಟೆ 6.30 ರಿಂದ ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ಗಣಪತಿ ಹೋಮ,
ಶ್ರೀ ಉಳ್ಳಾಲ್ತಿ ಅಮ್ಮನವರ ಹಾಗೂ ಬೆಮ್ಮೆರ್‍, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಭಂಡಾರಗಳ ಪುನರ್ ಪ್ರವೇಶ, ಪ್ರತಿಷ್ಠೆ, ಜೀವಕಲಶಾಭಿಷೇಕ, ಪ್ರತಿಷ್ಠಾ ಹೋಮ, ಪರಿಕಲಶಾಭಿಷೇಕ ಶ್ರೀ ಬೆಮ್ಮೆರ್‍, ಮಲೆಕೊರತಿ, ಕಲ್ಲುರ್ಟಿ, ಬೊಣ್ಯಕೊರತಿ ದೈವಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ
ಬೆಳಿಗ್ಗೆ 9.30 ರಿಂದ ಶ್ರೀ ಎಂ.ವೇಣುಗೋಪಾಲ್ ಪುತ್ತೂರು ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ಕಚೇರಿ, ಬೆಳಿಗ್ಗೆ 11.30ಕ್ಕೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಮಧ್ಯಾಹ್ನ ಮಹಾಅನ್ನಸಂತರ್ಪಣೆ, ಮಧ್ಯಾಹ್ನ ಶ್ರೀ ಉಳ್ಳಾಲ್ತಿ ಯಕ್ಷಪ್ರಿಯ ಕಲಾ ಸಂಘ, ಮಾಣಿ ಇವರ ಸಂಯೋಜನೆಯಲ್ಲಿ, ಗಣೇಶ್ ಪಾಲೆಚಾರ್‍ ಇವರ ಶಿಷ್ಯರಿಂದ ಮಕ್ಕಳ ಯಕ್ಷಗಾನ ’ಅಶ್ವಮೇಧ’ ನಡೆಯಲಿದೆ. ಸಂಜೆ 4ರಿಂದ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಭಜನಾ ನಂದಾವರ ಇವರಿಂದ ಭಜನೆ ನಡೆಯಲಿದೆ ಸಂಜೆ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 7 ರಿಂದ ಮಾಣಿಗುತ್ತು ಧರ್ಮಚಾವಡಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ- ಸಂಜೆ ಗಂಟೆ 6ರಿಂದ ಶ್ರೀ ವಿಜಯಕುಮಾರ್‍ ಕೊಡಿಯಾಲ್‌ಬೈಲ್ ರಚಿಸಿ, ನಿರ್ದೇಶಿಸಿರುವ ಶ್ರೀ ಸ್ವರಾಜ್ ಶೆಟ್ಟಿ ಅಭಿನಯಿಸಿರುವ ತುಳು ಹಾಸ್ಯಮಯ ನಾಟಕ ’ಮೈತಿದಿ’ ನಡೆಯಲಿದೆ.

25 ರಂದು ಸಂಜೆ ನಡೆಯುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಜೀರ್ಣೋದ್ಧಾರ ಸಮಿತಿಯ ಆಡಳಿತ ಮೊಕ್ತೇಸರ ಮತ್ತು ಅಧ್ಯಕ್ಷ ಯಂ.ಸಚಿನ್ ರೈ ಮಾಣಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ, ಪ್ರಧಾನ ಅರ್ಚಕ ಅನಂತ ಭಟ್ ಪಳನೀರು ಗೌರವ ಉಪಸ್ಥಿತರಿರುವರು.


ಮುಖ್ಯ ಅತಿಥಿಗಳಾಗಿ ಪೆರಾಜೆ ಶ್ರೀ ಗುಡ್ಡೆಚಾಮುಂಡಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕಾಂತ್ ಆಳ್ವ ಪೆರಾಜೆಗುತ್ತು, ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಿ.ನರೇಂದ್ರ ರೈ ನೆಲ್ತೊಟ್ಟು, ಕೆಲಿಂಜ ಶ್ರೀ ಉಳ್ಳಾಲ್ತಿ ಮಲರಾಯ ಚಾವಡಿ ಗಡಿ ಪ್ರಧಾನರಾದ ಗಿರಿಧರ ರೈ ಯಾನೆ ಮಂಜಾಳ್ವ ಬೆಂಞಂತ್ತಿಮಾರುಗುತ್ತು, ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಮ್‌ಪ್ರಸಾದ್ ರೈ ಉರ್ದಿಲಗುತ್ತು, ಬೃಜೇಶ್ ಜೈನ್ ಬಾಳ್ತಿಲಬೀಡು, ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವ್ಯವಸ್ಥಾನದ ಸಮಿತಿ ಅಧ್ಯಕ್ಷ ಎ.ಎಸ್ ಭಟ್, ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಕಡೇಶಿವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಾಂತಪ್ಪ ಪೂಜಾರಿ, ಅಮಿತ್ ಕುಮಾರ್‍ ಜೈನ್ ಕನ್ನೊಟ್ಟುಗುತ್ತು ಬರಿಮಾರು ಭಾಗವಹಿಸಲಿದ್ದಾರೆ.

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.5 ಮತ್ತು 6 ರಂದು ನಡೆಯಲಿದೆ. ಜ.30ರಂದು ಗೊನೆ ಕಡಿಯುವ ಕಾರ್ಯಕ್ರಮ ನಡೆಯಲಿದೆ. ಫೆ.5ರಂದು ರಾತ್ರಿ ಭಂಡಾರಯೇರಿ ಫೆ.6ರ ವರೆಗೆ ಜಾತ್ರೆ ನಡೆಯಲಿದೆ. ಫೆ. 6ರಂದು ಸಂಜೆ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ನೇಮ ನಡೆಯಲಿದೆ.

- Advertisement -

Related news

error: Content is protected !!