ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ






ಮಾಣಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ
ಬಂಟ್ವಾಳ ಹಾಗೂ ಸ.ಹಿ.ಪ್ರಾ.ಶಾಲೆ ಬಾಳ್ತಿಲ ಇದರ ಸಹಯೋಗದಲ್ಲಿ ಮಾಣಿ ಕ್ಲಸ್ಟರ್ ಮಟ್ಟದ, ಪ್ರಾಥಮಿಕ ಶಾಲಾ ವಿಭಾಗದ
ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಥಮ – ಡ್ಯಾರನ್ ಲಸ್ರಾದೊ(3ನೇ ತರಗತಿ)- ಛದ್ಮವೇಷ, ಬಿ ಕೆ ಜೋಷಿಕಾ ( 3ನೇ ತರಗತಿ)ದೇಶ ಭಕ್ತಿಗೀತೆ, ವಿನ್ಯ ಡಿ ಶೆಟ್ಟಿ(4ನೇ ತರಗತಿ)- ಭಕ್ತಿಗೀತೆ ಹಾಗೂ ಅಭಿನಯ ಗೀತೆ, ದಿಶಾ(4ನೇ ತರಗತಿ)-ಇಂಗ್ಲಿಷ್ ಕಂಠಪಾಠ ಹಾಗೂ ಕಥೆ ಹೇಳುವುದು, ವೈಷ್ಣವಿ ಎಸ್ ತುಂಗ(6ನೇ ತರಗತಿ)-ಕವನ ವಾಚನ ಹಾಗೂ ಧಾರ್ಮಿಕ ಪಠಣ ಸಂಸ್ಕೃತ, ಅಕ್ಷರ ಜೆ ಶೆಟ್ಟಿ(7ನೇ ತರಗತಿ)-ಇಂಗ್ಲಿಷ್ ಕಂಠಪಾಠ ಹಾಗೂ ಚಿತ್ರಕಲೆ, ತನುಶ್ರೀ ಎಸ್ ( 7ನೇ ತರಗತಿ)-ಕನ್ನಡ ಕಂಠಪಾಠ, ಹಸ್ತ ಜಿ (7ನೇ ತರಗತಿ)-ಭಕ್ತಿಗೀತೆ.
ದ್ವಿತೀಯ – ನೈನಿಕ ಯಂ ವೈ (3ನೇ ತರಗತಿ)-ಕ್ಲೇ ಮಾಡೆಲಿಂಗ್, ನತಾಶ ಜೆ (6ನೇ ತರಗತಿ)-ಕಥೆ ಹೇಳುವುದು, ಪ್ರತೀತ ಡಿ(6ನೇ ತರಗತಿ)-ಕ್ಲೇ ಮಾಡೆಲಿಂಗ್, ಫಾತಿಮಾ ಉಜ್ಮಾ (7ನೇ ತರಗತಿ)-ಹಿಂದಿ ಕಂಠಪಾಠ.
ತೃತೀಯ – ಐಶಾನಿ ಕೆ ಹೆಚ್ ( 4ನೇ ತರಗತಿ)-ಚಿತ್ರಕಲೆ, ಪಾವನ ಏ ಬಿ (4ನೇ ತರಗತಿ)-ಕನ್ನಡ ಕಂಠಪಾಠ, ಕೆ ನಿಧ ಫಾತಿಮಾ(7ನೇ ತರಗತಿ)-ಧಾರ್ಮಿಕ ಪಠಣ ಅರೇಬಿಕ್, ಆದ್ಯ ಎಸ್ ( 5ನೇ ತರಗತಿ)-ದೇಶ ಭಕ್ತಿಗೀತೆ. ಪ್ರಥಮ ಸ್ಥಾನವನ್ನು ಪಡೆದ 12 ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಗೊಂಡಿರುತ್ತಾರೆ. ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.








