Wednesday, July 29, 2026
spot_imgspot_img
spot_imgspot_img

ಮಾಣಿ: ವಿಟ್ಲ ಠಾಣಾಧಿಕಾರಿ ವಿನೋದ್ ರೆಡ್ಡಿಯವರ ನೇತೃತ್ವದಲ್ಲಿ ಬ್ಯಾರಿಕೇಡ್ ಅಳವಡಿಕೆ!

- Advertisement -
- Advertisement -

ಮಾಣಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಹಾಗೂ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಸಂದಿಸುವ ಮಾಣಿ ಜಂಕ್ಷನ್ ನಲ್ಲಿ ವಾಹನ ಸವಾರರ ಸುರಕ್ಷತೆಯ ಹಿತ ದೃಷ್ಟಿಯಿಂದ ವಿಟ್ಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ವಿನೋದ್ ರೆಡ್ಡಿಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ, ಊರ ನಾಗರಿಕರ ಸಂಪೂರ್ಣ ಸಹಕಾರದೊಂದಿಗೆ ರಸ್ತೆ ವಿಭಾಜಕಗಳನ್ನು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದು, ಎರಡು ಹೆದ್ದಾರಿಗಳು ಸಂದಿಸುವ ಜಾಗದಲ್ಲಿ ಈ ರಸ್ತೆ ವಿಭಾಜಕದ ನಿರ್ಮಾಣ ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ವಾಹನಗಳ ವ್ಯವಸ್ಥಿತ ಓಡಾಟಕ್ಕೆ ಅನುವು ಮಾಡಿಕೊಡಲಿದೆ ಎಂದರು.

ವಿಟ್ಲ ಠಾಣಾಧಿಕಾರಿ ವಿನೋದ್ ರೆಡ್ಡಿಯವರ ನೇತೃತ್ವದಲ್ಲಿ ಮಾಣಿ ಜಂಕ್ಷನ್ ನ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ್ದು, ಸಾರ್ವಜನಿಕರ ಪರವಾಗಿ ಹಾಗೂ ಶ್ರೀ ಶಾರದಾ ಯುವ ವೇದಿಕೆ ಪರವಾಗಿ ವಿಟ್ಲ ಠಾಣಾಧಿಕಾರಿ ವಿನೋದ್ ರೆಡ್ಡಿಯವರಿಗೇ ಧನ್ಯವಾದಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

driving
- Advertisement -

Related news

error: Content is protected !!