Sunday, June 14, 2026
spot_imgspot_img
spot_imgspot_img

ನಟಿಗೆ ಜೀವ ಬೆದರಿಕೆಯೊಡ್ಡಿ ಅತ್ಯಾಚಾರ; ಮಾಜಿ ಸಚಿವ ಅರೆಸ್ಟ್

- Advertisement -
- Advertisement -

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ನಾಯಕ, ತಮಿಳುನಾಡು ಮಾಜಿ ಸಚಿವ ಮಣಿಕಂಠಣ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ನಟಿ ಶಾಂತಿನಿ, ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು, ಖಾಸಗಿ ಫೋಟೋಗಳನ್ನು ತೋರಿಸಿ ಜೀವ ಬೆದರಿಕೆಯೊಡ್ಡುತ್ತಿರುವುದಾಗಿ ಮಾಜಿ ಸಚಿವ ಮಣಿಕಂಠನ್ ವಿರುದ್ಧ ಸ್ವತಃ ದೂರು ದಾಖಲಿಸಿದ್ದರು. 2017ರಲ್ಲಿ ಮಣಿಕಂಠನ್ ಸಚಿವರಾಗಿದ್ದ ವೇಳೆ ಮಲೇಷ್ಯಾ ಮೂಲದ ಶಾಂತಿನಿ ಪರಿಚಯವಾಗಿತ್ತು ಎನ್ನಲಾಗಿದೆ. ಬಂಧನ ಭೀತಿ ಎದುರಾಗುತ್ತಿದ್ದಂತೆ ಮಾಜಿ ಸಚಿವರು ಮದ್ರಾಸ್ ಹೈಕೋರ್ಟ್ ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.

ನಿರೀಕ್ಷಣಾ ಜಾಮೀನು ರದ್ದು ಬಳಿಕ ಮಣಿಕಂಠನ್ ತಲೆಮರೆಸಿಕೊಂಡಿದ್ದರು. ಇದೀಗ ಬೆಂಗಳೂರಿನಲ್ಲಿ ಪೊಲೀಸರು ಮಣಿಕಂಠನ್ ಅವರನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!