Saturday, June 28, 2025
spot_imgspot_img
spot_imgspot_img

ಮಣಿಪಾಲ: ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ..!

- Advertisement -
- Advertisement -

ಮಣಿಪಾಲ: ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ಯುವತಿ ಶ್ರೀಕೊಂಡಾ ಯಶಸ್ವಿನಿ (33)

ಶ್ರೀಕೊಂಡಾ ಯಶಸ್ವಿನಿ ಎಂಬವರ ಮೊಬೈಲ್‌ಗೆ ಮೇ 2ರಂದು ಲಿಂಕ್ ಬಂದಿದ್ದು, ಅದರಲ್ಲಿ ಸೂಚಿಸಿದಂತೆ ಅವರು ಬ್ಯಾಂಕ್ ಖಾತೆಯ ಮಾಹಿತಿಯನ್ನು ಭರ್ತಿಮಾಡಿ ಅಕೌಂಟ್ ಒಪನ್ ಮಾಡಿದ್ದರು. ನಂತರ ಅಪರಿಚಿತ ವ್ಯಕ್ತಿಯು ಸ್ಟಾಕ್ ಮಾರ್ಕೆಟ್‌ನಲ್ಲಿ ಹಣವನ್ನು ಹೂಡಿಕೆ ಮಾಡಲು ತಿಳಿಸಿದಂತೆ ಶ್ರೀಕೊಂಡಾ ಮೇ 6ರಿಂದ ಜೂ.4ರವರೆಗೆ ತಮ್ಮ ಖಾತೆಯಿಂದ ಒಟ್ಟು 9,29,000ರೂ. ಹಣವನ್ನು ಆರೋಪಿಯ ಬೇರೆ ಬೇರೆ ಖಾತೆಗೆ ಜಮಾ ಮಾಡಿದ್ದರು.

ಆದರೆ ಅಪರಿಚಿತ ವ್ಯಕ್ತಿಯು ಹೆಚ್ಚಿನ ಹಣವನ್ನು ನೀಡುವುದಾಗಿ ನಂಬಿಸಿ ಮೋಸ ಮಾಡಿ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ವಾಪಾಸ್ಸು ಹಣವನ್ನು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

- Advertisement -

Related news

error: Content is protected !!