Wednesday, April 24, 2024
spot_imgspot_img
spot_imgspot_img

ಬಿ.ಜೆ.ಪಿ ತೆಕ್ಕೆಗೆ ಬೀಳಲಿದೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರ

- Advertisement -G L Acharya panikkar
- Advertisement -

ಕೇರಳ: ಮಾಜಿ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮೀಶ್ ರೈ ನೇತ್ರತ್ವದಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಖಾಯಂ ಆಗಿ ಬರುವ ಮತಗಳು ಈ ಸಲ ಬಿ.ಜೆ.ಪಿಗೆ ಬಿದ್ದಿದೆ ಮತ್ತು ಕಾಂಗ್ರೆಸ್ ಸೋಲಿನತ್ತ ಮುಖ ಮಾಡಿದೆ ಮಾತ್ರವಲ್ಲದೆ ಎದುರಾಳಿ ಪಾಳಯ ಸುಮಾರು ಐದು ಸಾವಿರ ಮತದಲ್ಲಿ ಗೆಲ್ಲಬಹುದೇನೋ ಎಂದು ಮುಸ್ಲಿಂ ಲೀಗ್ ಲೆಕ್ಕಾಚಾರದ ಅನುಮಾನ ವ್ಯಕ್ತಪಡಿಸಿದೆ.

ayo

ಪ್ರಾಥಮಿಕವಾಗಿ ಈ ಪ್ರದೇಶದಲ್ಲಿ ಯು.ಡಿ.ಎಫ್. ಮತ್ತು ಬಿ.ಜೆ‌.ಪಿ ಪ್ರಭಲ ರಣಕಣದ ನಿರೀಕ್ಷಿತವಾಗಿದ್ದು ಕಾಂಗ್ರೆಸ್ ಪ್ರಭಾವ ದ ವರ್ಕಾಡಿ,ಮೀಂಜ,ಪುತ್ತಿಗೆ ಪಂಚಾಯತ್ ಮತಗಳು ಬಿಜೆಪಿ ಗೆ ಬಿದ್ದಿರಬಹುದು ಎಂಬ ರಾಜಕೀಯ ವಿಶ್ಲೇಷಣೆ ಪ್ರಚಲಿತದಲ್ಲಿದೆ.

ಕಳೆದ ಲೋಕಲ್ ಪಂಚಾಯತ್ ಚುನಾವಣೆಯಲ್ಲಿ ಹದಿನೈದು ವರ್ಷಗಳಿಂದ ಮೀಂಜ ಪಂಚಾಯತ್ ನಲ್ಲಿ ಆಡಳಿತ ಮಾಡುತ್ತಿದ್ದ ಕಾಂಗ್ರೆಸ್ ಈ ಬಾರಿ ಸೋಲನ್ನು ಕಂಡಿತ್ತು.ಬ್ಲ್ಲಾಕ್ ಪಂಚಾಯತ್ ಚುನಾವಣೆಯಲ್ಲಿ
ಯಾವ ಯಾವ ಅಭ್ಯರ್ಥಿಗಳು ಗೆದ್ದು ಭರವಸೆ ಮೂಡಿಸಿಲ್ಲ. ವರ್ಕಾಡಿ ,ಪೈವಳಿಕೆ, ಕೂಡ ಕಾಂಗ್ರೆಸ್ ಕಳಕೊಂಡಿದೆ. ಇದರ ಹಿಂದೆ ಯು.ಡಿ.ಎಫ್, ಅಭ್ಯರ್ಥಿ ಕಾರಣ ಎಂದು ಕಾಂಗ್ರೆಸ್ ನಾಯಕರು ಕೂಡ ಆರೋಪಿಸಿದ್ದರು.

ಕಳೆದ ಚುನಾವಣೆಯಷ್ಟು ಈ ಸಲ ಮಂಜೇಶ್ವರ ಕ್ಷೇತ್ರ ದಲ್ಲಿ ಚುನಾವಣಾ ಪ್ರಚಾರ ಆಗಲಿಲ್ಲ. ಈ ಸಲ ಕರ್ನಾಟಕದ ಯಾವ ನಾಯಕರು ಬಂದಿಲ್ಲ. ಜನಸಂಪರ್ಕ, ಮತ್ತು ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಬಂದಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಯಂತಹ ರಾಜಕೀಯ ಭವಿಷ್ಯದ ತಾರೆಯರನ್ನು ಕರೆಸಿಕೊಳ್ಳಲು ಮುಸ್ಲಿಂ ಲೀಗ್ ನಿಂದ ಸಾದ್ಯವಾಗಲಿಲ್ಲ. ಕೊನೆಯ ಹೊತ್ತಿಗೆ ಕೆ.ಪಿ.ಸಿ.ಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ನೇತ್ರತ್ವದಲ್ಲಿ ರೋಡ್ ಶೋ ನಡೆಸಲು ಆಯೋಜನೆಗೆ ಕರೆ ನೀಡಿದರೂ ಮಾಡಲಾಗಲಿಲ್ಲ. ಅಲ್ಲದೆ ಮುಸ್ಲಿಂ ದಾರ್ಮಿಕ ಮುಖಂಡ ಆಲಿ ಕುಂಞ ಉಸ್ತಾದ್ರ ನಿಧನವಾದುದರಿಂದ ಪ್ರಚಾರ ರ‍್ಯಾಲಿ ರದ್ದಾಗಿತ್ತು ಮತ್ತು ಪಕ್ಷದ ಪ್ರಚಾರ ಸುದ್ದಿ ಮತ್ತು ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿತ್ತೆಂದು ಮುಸ್ಲಿಂ ಲೀಗ್ ತಮ್ಮ ಅಸಹಾಯಕತೆ ತೋಡಿಕೊಂಡಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!