Tuesday, April 30, 2024
spot_imgspot_img
spot_imgspot_img

ಬಂಟ್ವಾಳ: ಮನೋಜ್ ಸಪಲ್ಯ ಕೊಲೆಯತ್ನ ಪ್ರಕರಣ; ಎಸ್.ಡಿ.ಪಿ.ಐ. ಮುಖಂಡನ ಬಂಧನ

- Advertisement -G L Acharya panikkar
- Advertisement -

ಬಂಟ್ವಾಳ: ಬಿ.ಸಿ.ರೋಡ್ ಅಜ್ಜಿಬೆಟ್ಟು ಎಂಬಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬ0ಧಿಸಿ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿ.ಸಿ.ರೋಡ್ ನಿವಾಸಿಗಳಾದ ಪರ್ಲಿಯಾ ನಿವಾಸಿಗಳಾದ ಎಸ್.ಡಿ.ಪಿ.ಮುಖಂಡ ಎಸ್. ಎಚ್.ಶಾಹುಲ್ ಹಮೀದ್ ಹಾಗೂ ಆತನ ಪುತ್ರ ಸಫ್ವಾನ್ ಮತ್ತು ಸ್ನೇಹಿತ ಇಮ್ರಾನ್ ಸದ್ಯ ಪೋಲೀಸರ ವಶದಲ್ಲಿರುವ ಆರೋಪಿಗಳು ಎನ್ನಲಾಗಿದೆ.

ಘಟನಾ ವಿವರ:
ಬ್ರಹ್ಮರಕೋಟ್ಲು ನಿವಾಸಿ ಮನೋಜ್ ಸಪಲ್ಯ ಎಂಬಾತನಿಗೆ ಎಪ್ರಿಲ್ 4ರಂದು ರಾತ್ರಿ ಬಿ.ಸಿ.ರೋಡ್ ಬಳಿಯ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಸ್ಕೂಟರ್ ನಲ್ಲಿ ಬಂದ ಇಬ್ಬರು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಚೂರಿ ಇರಿತ ಪ್ರಕರಣದ ತನಿಖೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದರು. ತನಿಖೆ ಯ ವೇಳೆ ಹಾದಿ ತಪ್ಪಿಸುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಮನೋಜ್ ಅವರ ತೇಜೋವದೆ ಮಾಡಿ ಇಲ್ಲಸಲ್ಲದ ಆರೋಪ ಮಾಡಿ ಆತನೇ ಅಣ್ಣನ ಕೈವಾಡ ವಿದೆ ಎಂಬ ಸುಳ್ಳು ಸುದ್ದಿ ಪಸರಿಸಿದ್ದರು.

ಆದರೆ ತನಿಖೆಯ ಹಾದಿ ತಪ್ಪದಂತೆ ಎಚ್ಚರ ವಹಿಸಿ ಆರೋಪಿಗಳ ವಶಕ್ಕೆ ಪಡೆಯುವಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ನೇತೃತ್ವದ ತಂಡ ಯಶಸ್ವಿಯಾಗಿದೆ. ಮಾಹಿತಿಯ ಆಧಾರದಲ್ಲಿ ಆರೋಪಿ ಇಮ್ರಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಆತನ ತಂದೆ ಶಾಹುಲ್ ಹಮೀದ್ ಮತ್ತು ಸಫ್ವಾನ್ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಶಾAತಿಯುತವಾಗಿದ್ದ ಬಂಟ್ವಾಳ ವನ್ನು ಮತ್ತೆ ಅಶಾಂತಿ ಯತ್ತ ಕೊಂಡುಹೋಗುವ ಪ್ಲಾನ್ ಎಸ್.ಡಿ.ಐ ಮುಖಂಡ ಶಾಹುಲ್ ಹಮೀದ್ ಮಾಡಿದ್ದರೆ ಎಂಬ ಅನುಮಾನ ಪೊಲೀಸರಲ್ಲಿ ಹುಟ್ಟುಹಾಕಿದೆ. ಈ ಹಿಂದೆ ಬಿಸಿರೋಡಿನ ಪ್ರಮುಖ ಭಾಗದ ಅಂಗಡಿಯಲ್ಲಿ ನಡೆದ ಶರತ್ ಮಡಿವಾಳ ಹತ್ಯೆಯ ಆರೋಪಿಗಳ ಶರಣಾಗತಿಯ ಹಿಂದೆ ರೂವಾರಿಯಾಗಿ ಕೆಲಸ ಮಾಡಿದ್ದ ಶಾಹುಲ್ ಹಮೀದ್ ಇನ್ನು ಅನೇಕ ಕೋಮು ಗಲಭೆ ಯಲ್ಲಿ ಈತನ ಹೆಸರು ಕೇಳಿ ಬರುತ್ತಿತ್ತು. ಇದೀಗ ಒಬ್ಬ ಅಮಾಯಕನ ಮೇಲಿನ ಹಲ್ಲೆಯಲ್ಲಿ ಅಪ್ಪ ಮಗ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

driving
- Advertisement -

Related news

error: Content is protected !!