Wednesday, April 2, 2025
spot_imgspot_img
spot_imgspot_img

(ಮಾ.20-27) ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಭರಣಿ ಮಹೋತ್ಸವ

- Advertisement -
- Advertisement -

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಮಾರ್ಚ್ 20-3-2025ನೇ ಗುರುವಾರದಿಂದ 27-3-2025ನೇಗುರುವಾರದವರೆಗೆ ಭರಣಿ ಮಹೋತ್ಸವ ನಡೆಯಲಿದೆ.

ದಿನಾಂಕ: 17-3-2025ನೇ ಸೋಮವಾರ ಬೆಳಿಗ್ಗೆ 9:00ರಿಂದ 10.00ವರೆಗೆ ಕಂಬಕ್ಕೆ ಮುಹೂರ್ತ (ಶ್ರೀ ಕ್ಷೇತ್ರದಲ್ಲಿ) ಮಧ್ಯಾಹ್ನ 12:30ಕ್ಕೆ ಮಗುವಿಗೆ ಮುಹೂರ್ತ (ಭಂಡಾರ ನಿಲಯದಲ್ಲಿ) ನಡೆದು ಬಳಿಕ 12:30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ: 18-3-2025ನೇ ಮಂಗಳವಾರ ಬೆಳಿಗ್ಗೆ 9:15 ರಿಂದ 9:45ವರೆಗೆ ಗೊನೆ ಮುಹೂರ್ತ ನಡೆಯಲಿದೆ.

ದಿನಾಂಕ: 20-3-2025ನೇ ಗುರುವಾರ ಅಪರಾಹ್ನ 3:00ಕ್ಕೆ ಶ್ರೀ ಕ್ಷೇತ್ರದ ಭಂಡಾರ ನಿಲಯದಿಂದ ಭಂಡಾರ ಹೊರಡುವುದು. ಸಂಜೆ 6:00 ರಿಂದ ಭಜನೆ, ಅನ್ನಸಂತರ್ಷಣೆ ನಡೆದು ರಾತ್ರಿ 8:00 ರಿಂದ ನಡಾವಳಿ ಉತ್ಸವ, ಬಿಂಬ ದರ್ಶನ ನಡೆಯಲಿದೆ. ಸಂಜೆ 6:00 ರಿಂದ ಕಲಾಸಾರಥಿ ತೋನ್ಸೆ ಪುಷ್ಕಳ್ ಕುಮಾರ್ ಇವರಿಂದ ಹರಿಕಥೆ “ಪಾರ್ವತಿ ಪರಿಣಯ” ನಡೆಯಲಿದೆ.

ದಿನಾಂಕ: 21-3-2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 8:30 ಧ್ವಜಾರೋಹಣ ನಡೆದು ಬೆಳಿಗ್ಗೆ ಗಂಟೆ 11:00 ರಿಂದ ಭಜನೆ ನಡೆದು 12:30 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6:00 ರಿಂದ ಭಜನೆ ನಡೆದು ರಾತ್ರಿ ಯಕ್ಷ ಸಿರಿ ಕಲಾ ವೃಂದ ಅಳಿಕೆ ಮಕ್ಕಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ದಿನಾಂಕ: 22-3-2025ನೇ ಶನಿವಾರ ಮದ್ಯಾಹ್ನ 11:00 ರಿಂದ ಭಜನೆ ನಡೆದು ಮಧ್ಯಾಹ್ನ 12:00ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6: 00ರಿಂದ ಭಜನೆ ನಡೆದು ರಾತ್ರಿ 8:00 ರಿಂದ ಅನ್ನಸಂರ್ಪಣೆ ಬಳಿಕ ರಾತ್ರಿ 9:00 ರಿಂದ ಪೂತಾಲಂಬಲಿ, ಬಿಂಬ ದರ್ಶನ, ಪುಷ್ಪಕಳ ನಡೆಯಲಿದೆ. ಸಂಜೆ 6: 00 ರಿಂದ ಶ್ರೀ ದೇವಿ ಮಹಿಳಾ ಯಕ್ಷಗಾನ ಮಂಡಳಿ ದೇವಿನಗರ, ಪುಣಚ ಇವರಿಂದ “ಸುದರ್ಶನೋಪಾಖ್ಯಾನ’ ನಡೆಯಲಿದೆ.

ದಿನಾಂಕ: 23-3-2025ನೇ ಆದಿತ್ಯವಾರ ಮದ್ಯಾಹ್ನ 12:00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:30 ರಿಂದ ಭಜನೆ ಬಳಿಕ ರಾತ್ರಿ 8: 00 ರಿಂದ ಅನ್ನಸಂತರ್ಪಣೆ ನಡೆದು ರಾತ್ರಿ 8:00 ರಿಂದ ಪಡುನಡೆ ಉತ್ಸವ, ಅಮೃತಕಲಶ, ತಾಲಪೊಲಿ ನಡೆಯಲಿದೆ. ಸಂಜೆ 7: 00 ರಿಂದ ಉಕ್ಕುಡ ವಲಯದ ಪ್ರಾಯೋಜಕತ್ವದಲ್ಲಿ ವೈಷ್ಣವಿ ನಾಟ್ಯಾಲಯ ಪುತ್ತೂರು ವಿದುಷಿ ಯೋಗಿಶ್ವರಿ ಜಯಪ್ರಕಾಶ್‌‌ ಇವರ ಶಿಷ್ಯೆಯರಿಂದ ಭರತನಾಟ್ಯ ನಡೆಯಲಿದೆ.

ದಿನಾಂಕ: 24-3-2025ನೇ ಸೋಮವಾರ ಮದ್ಯಾಹ್ನ 12:00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಸಂಜೆ 6:00 ರಿಂದ ಭಜನೆ ನಡೆಯಲಿದೆ. ರಾತ್ರಿ 8:00 ರಿಂದ ಅನ್ನಸಂತರ್ಪಣೆ ನಡೆದು ರಾತ್ರಿ 9:00 ಬಲಿ ಉತ್ಸವ, ಬಿಂಬದರ್ಶನ, ಚದುರಂಗ ಕಳ ಬಳಿಕ ಸಂಜೆ 6:00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ದಿನಾಂಕ: 25-3-2025ನೇ ಮಂಗಳವಾರ ಮಧ್ಯಾಹ್ನ 11:00 ರಿಂದ ಭಜನೆ ನಡೆದು 12:00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6-00 ರಿಂದ ಭಜನೆ ಬಳಿಕ 7:00ಕ್ಕೆ ವಿಟ್ಲ ಶ್ರೀ ಮಹತೋಭಾರ ಪಂಚಲಿಂಗೇಶ್ವರ ದೇವರ ಭೇಟಿ ಬಳಿಕ ರಾತ್ರಿ 8:00 ರಿಂದ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ: 26-3-2025ನೇ ಬುಧವಾರ ಮಧ್ಯಾಹ್ನ 11:00ರಿಂದ ಭಜನೆ ನಡೆದು 12-00ರಿಂದ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6:00 ಕ್ಕೆ ಭಜನೆ ಬಳಿಕ ರಾತ್ರಿ 8:00ರಿಂದ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10:300ರಿಂದ ಬಲಿ ಉತ್ಸವ, ಬಿಂಬದರ್ಶನ, ಮಡಸ್ನಾನ, ಸರ್ಪಕಳ, ಮೂಡುನಡೆ, ಅಮೃತ ಕಲಶ, ತಾಲಪೊಲಿ ನಡೆಯಲಿದೆ. ಸಂಜೆ 6:00 ರಿಂದ ನಾಟ್ಯನಿಕೇತನ ಕೊಲ್ಯ ಪ್ರಸ್ತುತ ಪಡಿಸುವ ‘ಎಳುವೆರ್‌ದೈಯ್ಯಾರ್’ ಎಂಬ ತುಳು ನೃತ್ಯ ರೂಪಕ ನಡೆಯಲಿದೆ.

ದಿನಾಂಕ: 27-3-2025ನೇ ಗುರುವಾರ ಮಧ್ಯಾಹ್ನ ಗಂಟೆ 11:00ರಿಂದ ಭಜನೆ ಬೆಳಿಗ್ಗೆ ಗಂಟೆ 6: 00ಕ್ಕೆ ಧ್ವಜಾವರೋಹಣ ನಡೆದು 10:00 ರಿಂದ ಶ್ರೀ ವಿಷ್ಣುಮೂರ್ತಿ ದೈವದ ನೇಮೋತ್ಸವ, ಶ್ರೀ ಧೂಮಾವತಿ ದೈವದ ನೇಮೋತ್ಸವ, ಶ್ರೀ ಪಂಜುರ್ಲಿ ದೈವದ ನೇಮೋತ್ಸವ ತದನಂತರ ಭಂಡಾರ ಮರಳುವುದು. ಮದ್ಯಾಹ್ನ 12:30ರಿಂದ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!