Saturday, September 26, 2026
spot_imgspot_img
spot_imgspot_img

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವನರ್ತಕ ಶೇಖರ ಪರವರವರಿಗೆ ಪಂಜಿಕಲ್ಲು ಮನೆತನದ ಪರವಾಗಿ ಅಭಿನಂದನಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ : ಬಂಟ್ವಾಳ ತಾಲೂಕು ಕೇಪು ಗ್ರಾಮದ ಪಂಜಿಕಲ್ಲು ಧರ್ಮದೈವ ಪಂಜುರ್ಲಿ, ಧೂಮಾವತಿ ಮತ್ತು ರಕ್ತೇಶ್ವರಿ ದೇವಸ್ಥಾನದ ದೈವಗಳ ನೇಮೋತ್ಸವ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವನರ್ತಕ ಶೇಖರ ಪರವ ಇವರನ್ನು ಪಂಜಿಕಲ್ಲು ಶರ್ಮ ಮನೆತನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಶ್ರೀಯುತರ ಪಂಜಿಕಲ್ಲು ಮನೆತನದಲ್ಲಿ ಸುಮಾರು 23 ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸಿರುತ್ತಾರೆ.

ಕಾರ್ಯಕ್ರಮದ ವೇದಿಕೆಯಲ್ಲಿ ಮನೆತನದ ಹಿರಿಯ ಸದಸ್ಯ ಹರಿಶರ್ಮ, ಗೋಪಾಲಕೃಷ್ಣ ಶರ್ಮ, ಗಣಪತಿ ಶರ್ಮ, ಹಾಗೂ ದಯಾನಂದ ಶರ್ಮ ಉಪಸ್ಥಿತರಿದ್ದರು. ದೇವಾನಂದ ಶರ್ಮ ರವರು ಸ್ವಾಗತಿಸಿ, ಶಿಕ್ಷಕಿ ಸಂಗೀತ ಶರ್ಮಾ ಪಿ ಜಿ ವಂದಿಸಿದರು. ಮನೆಯವರು, ಕುಟುಂಬದ ಸದಸ್ಯರು, ಊರಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!