Sunday, June 16, 2024
spot_imgspot_img
spot_imgspot_img

ಕಾಸರಗೋಡು: ಮನೆಗೆ ಬೆಂಕಿ ಹಚ್ಚಿದ ವಿವಾಹಿತ ಮಹಿಳೆ ಅರೆಸ್ಟ್‌

- Advertisement -G L Acharya panikkar
- Advertisement -

ಕಾಸರಗೋಡು: ಯುವಕನ ಜೊತೆ ವಾಸವಾಗಿದ್ದ ವಿವಾಹಿತ ಮಹಿಳೆ ಮನೆಗೆ ಬೆಂಕಿ ಹಚ್ಚಿದ ಘಟನೆ ಪೆರ್ಮುದೆ ಸಮೀಪದ ಮಾಣಿತ್ತಡ್ಕ ದಲ್ಲಿ ನಡೆದಿದೆ.

ಮಾಣಿತ್ತಡ್ಕದ ನಯನ ಕುಮಾರ್ ಜೊತೆ ವಾಸವಾಗಿದ್ದ ವಿವಾಹಿತೆ ಉಷಾ ಸೋಮವಾರ ರಾತ್ರಿ ಕೃತ್ಯ ನಡೆಸಿದ್ದಾಳೆ. ಇಬ್ಬರ ನಡುವೆ ಉಂಟಾದ ವೈಮನಸ್ಸು ಕೃತ್ಯಕ್ಕೆ ಕಾರಣ ಎನ್ನಲಾಗಿದೆ.ಘಟನೆಗೆ ಸಂಬಂಧಪಟ್ಟಂತೆ ಉಷಾಳನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉಷಾ ವಿವಾಹಿತೆ ಯಾಗಿದ್ದು, ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಒಂದೂವರೆ ವರ್ಷದ ಹಿಂದೆ ಪತಿ , ಮಕ್ಕಳ ನ್ನು ತ್ಯಜಿಸಿ ನಯನ ಕುಮಾರ್ ಜೊತೆ ವಾಸವಾಗಿದ್ದಳು. ಸೋಮವಾರ ರಾತ್ರಿ ನಯನ ಕುಮಾರ್ ನ ತಾಯಿ ಮಾತ್ರ ಮನೆಯಲ್ಲಿದ್ದ ಸಂದರ್ಭದಲ್ಲಿ ಸೀಮೆ ಎಣ್ಣೆ ಸುರಿದು ಉಷಾ ಮನೆಗೆ ಬೆಂಕಿ ಹಚ್ಚಿದ್ದು, ಹೆಂಚು ಹಾಸಿದ ಮನೆ ಭಾಗಶಃ ಹಾನಿ ಗೊಂಡಿದೆ.

ನಯನ ಕುಮಾರ್ ನ ತಾಯಿ ಮನೆಯಿಂದ ಓಡಿ ಹೋದ ಕಾರಣ ಅಪಾಯ ತಪ್ಪಿದ್ದು, ಸ್ಥಳಕ್ಕೆ ತಲಪಿದ ಪರಿಸರ ವಾಸಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿ ಸಿದ್ದರು.ನಯನ ಕುಮಾರ್ ನ ತಾಯಿ ನೀಡಿದ ದೂರಿನಂತೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.

- Advertisement -

Related news

error: Content is protected !!